ಬೆಳಿಗ್ಗೆ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತಿದ್ದೀರಾ…? ಇಲ್ಲಿದೆ ಒಂದು ಸುಲಭವಾಗಿ ಮಾಡಬಹುದಾದ ಗೋಧಿ ದೋಸೆ. ಬೇಗನೆ ರೆಡಿಯಾಗುತ್ತೆ ಜತೆಗೆ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ.
ಬೇಕಾಗುವ ಸಾಂಗ್ರಿಗಳು:
ಗೋಧಿ ಹಿಟ್ಟು – 1 1/2 ಕಪ್, ಅಕ್ಕಿ ಹಿಟ್ಟು – ಅರ್ಧ ಕಪ್, ಮೊಸರು – 2 ಟೇಬಲ್ ಸ್ಪೂನ್, ರವೆ – 2 ಟೇಬಲ್ ಸ್ಪೂನ್, ನೀರು – 4 ಕಪ್, ಜೀರಿಗೆ – 1/4 ಟೀ ಸ್ಪೂನ್, ರುಚಿಗೆ ತಕ್ಕಷ್ಟು – ಉಪ್ಪು, ಒಣಮೆಣಸು – 2, ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ್ದು)
ಮಾಡುವ ವಿಧಾನ:
ಒಂದು ಪಾತ್ರೆಗೆ ಗೋಧಿಹಿಟ್ಟು, ರವೆ, ಅಕ್ಕಿಹಿಟ್ಟು, ಉಪ್ಪು, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ನೀರು ಸೇರಿಸಿ ಮೊಸರು ಹಾಕಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಜೀರಿಗೆ, ಒಣಮೆಣಸು, ಈರುಳ್ಳಿ ಹಾಕಿ ಮಿಕ್ಸ್ ಮಾಡಿ 10 ನಿಮಿಷ ಹಾಗೆಯೇ ಬಿಡಿ.
ನಂತರ ಗ್ಯಾಸ್ ಮೇಲೆ ತವಾ ಇಟ್ಟು ಅದು ಬಿಸಿಯಾಗುತ್ತಲೆ ತುಸು ಎಣ್ಣೆ ಸವರಿ ತೆಳುವಾಗಿ ದೋಸೆ ಮಾಡಿಕೊಂಡು ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ.