ಬಿರಿಯಾನಿ ಮಾಡಿದಾಗ ರುಚಿಕರವಾದ ರಾಯತ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಅದು ಅಲ್ಲದೇ ತೂಕ ಇಳಿಸಿಕೊಳ್ಳಬೇಕೆನ್ನುವವರು ಇದೇ ರಾಯತಕ್ಕೆ ಸ್ವಲ್ಪ ತರಕಾರಿ ಸೇರಿಸಿಕೊಂಡು ಸೇವಿಸಿದರೆ ಬೇಗ ಫಲಿತಾಂಶ ಸಿಗಲಿದೆ.
1 ಬೌಲ್ ನಷ್ಟು ಸಣ್ಣಗೆ ಹಚ್ಚಿಟ್ಟುಕೊಂಡ ಈರುಳ್ಳಿ, 1 ಬೌಲ್ ಸಣ್ಣಗೆ ಹಚ್ಚಿಟ್ಟುಕೊಂಡ ಟೊಮೆಟೊ (ಬೀಜ ತೆಗೆದಿದ್ದು) 4-ಹಸಿಮೆಣಸು-ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. 1/2 ಕಪ್-ಕೊತ್ತಂಬರಿಸೊಪ್ಪು, 1 ಬೌಲ್-ಮೊಸರು.
ಮೊದಲಿಗೆ ಒಂದು ಕಪ್ ಮೊಸರನ್ನು ಒಂದು ಅಗಲವಾದ ಬೌಲ್ ಗೆ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ, ಟೊಮೆಟೊ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ಆಮೇಲೆ ಕೊತ್ತಂಬರಿಸೊಪ್ಪು, ಹಸಿಮೆಣಸು ಹಾಕಿ ಮತ್ತೊಮ್ಮೆ ತಿರುಗಿಸಿಕೊಳ್ಳಿ. ¼ ಟೀ ಸ್ಪೂನ್ ಬ್ಲ್ಯಾಕ್ ಸಾಲ್ಟ್, ಚಿಟಿಕೆ ಕಾಳುಮೆಣಸಿನ ಪುಡಿ, ಬೇಕಿದ್ದರೆ 1 ಚಮಚದಷ್ಟು ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.