alex Certify ಥಟ್ಟಂತ ಮಾಡಿ ʼಕಾಯಿ ಸಾಸಿವೆʼ ಅನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ಮಾಡಿ ʼಕಾಯಿ ಸಾಸಿವೆʼ ಅನ್ನ

ದಿನಾ ಇಡ್ಲಿ, ದೋಸೆ, ಪಲಾವ್ ತಿಂದು ಬೇಜಾರಾದವರು ಒಮ್ಮೆ ಈ ಕಾಯಿ ಸಾಸಿವೆ ಅನ್ನ ಮಾಡಿಕೊಂಡು ತಿನ್ನಿರಿ. ಇದು ಬೆಳಿಗ್ಗಿನ ತಿಂಡಿಗೆ ಚೆನ್ನಾಗಿರುತ್ತದೆ. ರಾತ್ರಿ ಮಿಕ್ಕಿದ ಅನ್ನದಿಂದಲೂ ಇದನ್ನು ಮಾಡಿಕೊಳ್ಳಬಹುದು. ಥಟ್ಟಂತ ಆಗುತ್ತೆ ಇದು.

ಬೇಕಾಗುವ ಸಾಮಗ್ರಿ:

ಅನ್ನ -2 ಕಪ್, ¾ ಕಪ್ ತೆಂಗಿನತುರಿ, ಚಿಟಿಕೆ-ಇಂಗು, 3 ಟೇಬಲ್ ಸ್ಪೂನ್ ನಷ್ಟು ಎಣ್ಣೆ, ½ ಟೀ ಸ್ಪೂನ್ –ಸಾಸಿವೆ, 1 ಟೇಬಲ್ ಸ್ಪೂನ್-ಉದ್ದಿನಬೇಳೆ, ½ ಟೇಬಲ್ ಸ್ಪೂನ್-ಕಡಲೇಬೇಳೆ, 10 ಎಸಳು-ಕರಿಬೇವು,4 ಟೇಬಲ್ ಸ್ಪೂನ್-ಕಡಲೇಬೀಜ 4-ಹಸಿಮೆಣಸು, ಸಣ್ಣ ನೆಲ್ಲಿಕಾಯಿ ಗಾತ್ರದಷ್ಟು-ಹುಣಸೇಹಣ್ಣು, 3-ಒಣಮೆಣಸು, ¾ ಟೀ ಸ್ಪೂನ್ –ಸಾಸಿವೆ, ½ ಟೇಬಲ್ ಸ್ಪೂನ್-ಬೆಲ್ಲ, ಚಿಟಿಕೆ-ಅರಿಸಿನ, ರುಚಿಗೆ ತಕ್ಕಷ್ಟು-ಉಪ್ಪು, 3 ಟೇಬಲ್ ಸ್ಪೂನ್ ನಷ್ಟು-ನೀರು.

ಮಾಡುವ ವಿಧಾನ:

ಮಿಕ್ಸಿ ಜಾರಿಗೆ ಕಾಯಿತುರಿ, ಸಾಸಿವೆ, ಬೆಲ್ಲ, ಮೆಣಸಿನಕಾಯಿ, ಹುಣಸೆಹಣ್ಣು, ಉಪ್ಪು, ಅರಿಶಿನ ಹಾಕಿ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ, ಇಂಗು, ಕಡಲೇಬೇಳೆ, ಉದ್ದಿನಬೇಳೆ, ಕಡಲೆಬೀಜ ಹಾಕಿ.

ನಂತರ ಇದಕ್ಕೆ ಕರಿಬೇವು ಹಾಕಿ. ನಂತರ ರುಬ್ಬಿಟ್ಟುಕೊಂಡ ಮಿಶ್ರಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದ ನೀರು ಆವಿಯಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉರಿಯನ್ನು ಕಡಿಮೆ ಮಾಡಿಟ್ಟುಕೊಂಡು ಅನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ 5 ನಿಮಿಷ ಗ್ಯಾಸ್ ಮೇಲೆ ಸಣ್ಣ ಉರಿಯಲ್ಲಿ ಹಾಗೇ ಇಡಿ. ನಂತರ ಗ್ಯಾಸ್ ಆಫ್ ಮಾಡಿ. ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...