ಬಾಳೆಹಣ್ಣಿನ ರಸಾಯನ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಮನೆಯಲ್ಲಿ ಬಾಳೆಹಣ್ಣು ಇದ್ದರೆ ಒಮ್ಮೆ ಟ್ರೈ ಮಾಡಿ. ಥಟ್ಟಂತ ಮಾಡಿಬಿಡಬಹುದು.
ಬೇಕಾಗುವ ಸಾಮಗ್ರಿಗಳು:
ಬಾಳೆಹಣ್ಣು 3, ಸಕ್ಕರೆ-1 ಟೇಬಲ್ ಸ್ಪೂನ್, ತೆಂಗಿನಕಾಯಿ ತುರಿ-1 ಟೇಬಲ್ ಸ್ಪೂನ್, ಏಲಕ್ಕಿ ಪುಡಿ-1/4 ಟೀ ಸ್ಪೂನ್, ಬೆಲ್ಲ-1/4 ಕಪ್, ಜೇನುತುಪ್ಪ-1/2 ಟೀ ಸ್ಪೂನ್, ತುಪ್ಪ-ಸ್ವಲ್ಪ.
ಮಾಡುವ ವಿಧಾನ:
ಒಂದು ಬೌಲ್ ಗೆ ಬಾಳೆಹಣ್ಣನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ. ನಂತರ ಇದಕ್ಕೆ ಬೆಲ್ಲ, ಸಕ್ಕರೆ, ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ, ಜೇನುತುಪ್ಪ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಗೋಡಂಬಿ ಹಾಗೂ ಬಾದಾಮಿ ಚೂರುಗಳನ್ನು ಕೂಡ ಸೇರಿಸಿ ಸರ್ವ್ ಮಾಡಿ.