ಸಿಹಿಯಾದ ರಬ್ದಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಆದರೆ ಇದನ್ನು ಮಾಡುವುದು ತುಸು ಕಷ್ಟದ ಕೆಲಸ. ತುಂಬಾ ಸಮಯ ಹಿಡಿಯುತ್ತದೆ. ಇಲ್ಲಿ ಥಟ್ಟಂತ ಆಗುವ ರಬ್ಡಿ ಮಾಡುವ ವಿಧಾನ ಇದೆ ನೋಡಿ.
1.5 ಲೀಟರ್-ದಪ್ಪಗಿನ ಹಾಲು, 200 ಎಂ.ಎಲ್ ಕಂಡೆನ್ಸಡ್ ಮಿಲ್ಕ್, ¼ ಕಪ್- ಚಿಕ್ಕದಾಗಿ ಕತ್ತರಿಸಿದ ಡ್ರೈ ಫ್ರುಟ್ಸ್, 4-6-ಕೇಸರಿ ದಳ.
ಒಂದು ಅಗಲ ತಳದ ಪಾತ್ರೆಗೆ ಹಾಲು ಹಾಕಿ ಅದು ಮುಕ್ಕಾಲು ಭಾಗವಾಗುವಷ್ಟು ಕುದಿಸಿ. ನಂತರ ಅದಕ್ಕೆ ಕಂಡೆನ್ಸಡ್ ಮಿಲ್ಕ್ , ಕೇಸರಿ ದಳ, ಡ್ರೈ ಫ್ರುಟ್ಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಇದು ದಪ್ಪಗಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ಬೇಕಿದ್ದರೆ ಇದರ ಮೇಲೆ ತುಸು ಡ್ರೈ ಫ್ರುಟ್ಸ್ ಸೇರಿಸಿ ಸರ್ವ್ ಮಾಡಿ.