ಹಾಲಿನ ಕೆನೆ ಸೇವನೆಯಿಂದ ಕೊಬ್ಬು ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಬಳಸದೆ ಎಸೆಯುವವರೇ ಹೆಚ್ಚು. ಅದರಿಂದ ತ್ವಚೆಗಾಗುವ ಪ್ರಯೋಜನಗಳನ್ನು ತಿಳಿದರೆ ನೀವು ಖಂಡಿತವಾಗಿ ಅಚ್ಚರಿ ಪಡುತ್ತೀರಿ.
ಪ್ರತಿದಿನ ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯ ಸುಕ್ಕು ಹಾಗೂ ಗೆರೆಗಳನ್ನು ನಿವಾರಿಸಬಹುದು.
ಎರಡು ಚಮಚ ಹಾಲಿನ ಕೆನೆಯ ಜೊತೆಗೆ ಒಂದು ಚಮಚ ಗಂಧದ ಪುಡಿ, ಒಂದು ಚಮಚ ಕಡಲೆ ಹಿಟ್ಟು, ಒಂದು ಚಿಟಿಕೆ ಅರಿಶಿನವನ್ನು ಬೆರೆಸಿಕೊಳ್ಳಿ. ಇದರ ಮೇಲೆ ಕೆಲವು ಹನಿಗಳಷ್ಟು ರೋಸ್ ವಾಟರ್ ಚಿಮುಕಿಸಿ.
ಇವನ್ನೆಲ್ಲ ಸೇರಿಸಿ, ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆ ಮೇಲೆ ಲೇಪಿಸಿ ಉಜ್ಜಿಕೊಳ್ಳಿ. 10 ನಿಮಿಷ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖದ ಕಲೆ, ಮೊಡವೆ ದೂರವಾಗಿ ಮೃದುವಾದ ಮುಖ ನಿಮ್ಮದಾಗುತ್ತದೆ.