ಹೊರಗಿನ ಧೂಳು, ಅಥವಾ ಕೆಲವೊಮ್ಮೆ ನಾವು ತಿನ್ನುವ ಆಹಾರದಿಂದ ತ್ವಚೆಯಲ್ಲಿ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ.
ಇದಕ್ಕೆ ಮಾರ್ಕೆಟ್ ನಿಂದ ತಂದ ಕೆಮಿಕಲ್ ಯುಕ್ತ ಕ್ರಿಂ, ಫೇಸ್ ವಾಶ್ ಗಳನ್ನು ಉಪಯೋಗಿಸುವ ಬದಲು ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಸುಲಭದಲ್ಲಿ ನಿವಾರಿಸಿಕೊಳ್ಳಬಹುದು.
ಕಡಲೆಹಿಟ್ಟು ತ್ವಚೆಗೆ ತುಂಬಾ ಒಳ್ಳೆಯದು. ಹಾಗೇ ಅರಿಶಿನ ಕೂಡ ನಿಮ್ಮ ಮುಖದಲ್ಲಿನ ಕಲೆಯನ್ನು ನಿವಾರಿಸುತ್ತದೆ. ಹಾಗೇ ಮೊಡವೆಯನ್ನು ಕಡಿಮೆ ಮಾಡುತ್ತದೆ. 2 ಚಮಚ ಕಡಲೆಹಿಟ್ಟಿಗೆ 1 ಟೀ ಸ್ಪೂನ್ ಅರಿಶಿನ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಬಿಟ್ಟು ಮುಖ ತೊಳೆಯಿರಿ. ಅರಿಶಿನ, ಕಡಲೆಹಿಟ್ಟು ಆಗದವರು ಹೆಸರಿಟ್ಟು ಉಪಯೋಗಿಸಿ.
ಹಸಿ ಹಾಲು ಕೂಡ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯಕಾರಿ. ಹಾಗೇ ಇದು ಮುಖದ ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಹಸಿ ಹಾಲನ್ನು ತೆಗೆದುಕೊಂಡು ಇದರಿಂದ ಮುಖಕ್ಕೆ ಮಸಾಜ್ ಮಾಡಿಕೊಂಡು 10 ನಿಮಿಷಗಳ ಕಾಲ ಹಾಗೇಯೇ ಬಿಟ್ಟು ನಂತರ ತೊಳೆಯಿರಿ. ಹಾಗೇ ಹಸಿ ಹಾಲಿಗೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಮುಖಕ್ಕೆ ನಿಧಾನಕ್ಕೆ ಮಸಾಜ್ ಮಾಡಿದರೆ ಮುಖದ ತ್ವಚೆ ಅಂದವಾಗುತ್ತದೆ.
ಸೌತೆಕಾಯಿ ಹಾಗೂ ಮೊಸರು ಕೂಡ ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. 3 ತುಂಡು ಸೌತೆಕಾಯಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ನಯವಾಗಿ ರುಬ್ಬಿಕೊಳ್ಳಿ ನಂತರ ಇದಕ್ಕೆ 3 ಟೇಬಲ್ ಸ್ಪೂನ್ ನಷ್ಟು ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಪ್ಯಾಕ್ ರೀತಿ ಹಾಕಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆಯಿರಿ.