alex Certify ತೆರೆದ ಕೋವ್ಯಾಕ್ಸಿನ್​ ಲಸಿಕೆಗಳನ್ನು 28 ದಿನಗಳವರೆಗೂ ಬಳಕೆ ಮಾಡಲು ಅನುಮೋದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆರೆದ ಕೋವ್ಯಾಕ್ಸಿನ್​ ಲಸಿಕೆಗಳನ್ನು 28 ದಿನಗಳವರೆಗೂ ಬಳಕೆ ಮಾಡಲು ಅನುಮೋದನೆ

ಭಾರತವು ಸಂಭವನೀಯ ಕೋವಿಡ್​ ಮೂರನೇ ಅಲೆಗೆ ಸಜ್ಜಾಗುತ್ತಿರುವ ನಡುವೆಯೇ ಕೊರೊನಾ ಲಸಿಕೆ ತಯಾರಕ ಸಂಸ್ಥೆಯಾದ ಭಾರತ್​ ಬಯೋಟೆಕ್​ ತೆರೆದ ಕೋವಿಡ್ 19 ಲಸಿಕೆಗಳನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್​​ನಲ್ಲಿ 28 ದಿನಗಳವರೆಗೆ ಸಂಗ್ರಹಿಸಿ ಇಡಬಹುದು ಎಂದು ಹೇಳಿದೆ. ಕಂಪನಿಯು ಇತ್ತೀಚೆಗೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಲಸಿಕೆಯ ಜೀವಿತಾವಧಿಯನ್ನು ತಯಾರಾದ ದಿನಾಂಕದಿಂದ 12 ತಿಂಗಳುಗಳವರೆಗೆ ವಿಸ್ತರಿಸಲಾಗಿದೆ.

ಕೊವ್ಯಾಕ್ಸಿನ್​​ನ ಪ್ರತಿ ಬಾಟಲಿಯು 20 ಡೋಸ್​ಗಳನ್ನು ಹೊಂದಿರುತ್ತದೆ. ಆರೋಗ್ಯ ಕಾರ್ಯಕರ್ತರು ಕೊರೊನಾ ಲಸಿಕೆ ಅಭಿಯಾನ ಮುಗಿಯುತ್ತಿದ್ದಂತೆಯೇ ತೆರೆದ ವಯಲ್​ಗಳನ್ನು ಬಿಸಾಡಬೇಕು ಎಂದೇನಿಲ್ಲ. ಇದನ್ನು ನೀವು 28 ದಿನಗಳವರೆಗೆ ಸಂಗ್ರಹಿಸಿ ಇಡಬಹುದಾಗಿದೆ. ಈ ರೀತಿ ಮಾಡುವುದರಿಂದ ಲಸಿಕೆ ವ್ಯರ್ಥವಾಗುವುದನ್ನು ತಡೆಯಬಹುದಾಗಿದೆ. ಕಳೆದ ತಿಂಗಳು ಹೈದರಾಬಾದ್​ ಮೂಲಕ ಭಾರತ್​ ಬಯೋಟೆಕ್​ ಕಂಪನಿಯು ಕೊವ್ಯಾಕ್ಸಿನ್​ ಲಸಿಕೆಯ ಜೀವಿತಾವಧಿಯನ್ನು ವಿಸ್ತರಿಸಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನಿಂದ ಅನುಮೋದನೆಯನ್ನು ಪಡೆದಿತ್ತು.

ದೇಶದಲ್ಲಿ ಅನೇಕ ತಿಂಗಳುಗಳ ಹಿಂದೆಯೇ ಅನೇಕ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದ್ದರೂ ಸಹ ಇವುಗಳಲ್ಲಿ ಕೋವಿಶೀಲ್ಡ್​, ಕೋವ್ಯಾಕ್ಸಿನ್​ ಹಾಗೂ ಸ್ಪುಟ್ನಿಕ್​ ವಿ ಲಸಿಕೆಗಳನ್ನು 138 ಡೋಸ್​ಗೂ ಹೆಚ್ಚು ಬಾರಿ ನೀಡಲಾಗಿದೆ. ಕೋವಿನ್​ ಡ್ಯಾಶ್​ಬೋರ್ಡ್ ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಸುಮಾರು 15 ಕೋಟಿ ಡೋಸ್​ ಕೋವ್ಯಾಕ್ಸಿನ್​ನ್ನು ದೇಶದಲ್ಲಿ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...