ಭಾರತವು ಸಂಭವನೀಯ ಕೋವಿಡ್ ಮೂರನೇ ಅಲೆಗೆ ಸಜ್ಜಾಗುತ್ತಿರುವ ನಡುವೆಯೇ ಕೊರೊನಾ ಲಸಿಕೆ ತಯಾರಕ ಸಂಸ್ಥೆಯಾದ ಭಾರತ್ ಬಯೋಟೆಕ್ ತೆರೆದ ಕೋವಿಡ್ 19 ಲಸಿಕೆಗಳನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್ನಲ್ಲಿ 28 ದಿನಗಳವರೆಗೆ ಸಂಗ್ರಹಿಸಿ ಇಡಬಹುದು ಎಂದು ಹೇಳಿದೆ. ಕಂಪನಿಯು ಇತ್ತೀಚೆಗೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಲಸಿಕೆಯ ಜೀವಿತಾವಧಿಯನ್ನು ತಯಾರಾದ ದಿನಾಂಕದಿಂದ 12 ತಿಂಗಳುಗಳವರೆಗೆ ವಿಸ್ತರಿಸಲಾಗಿದೆ.
ಕೊವ್ಯಾಕ್ಸಿನ್ನ ಪ್ರತಿ ಬಾಟಲಿಯು 20 ಡೋಸ್ಗಳನ್ನು ಹೊಂದಿರುತ್ತದೆ. ಆರೋಗ್ಯ ಕಾರ್ಯಕರ್ತರು ಕೊರೊನಾ ಲಸಿಕೆ ಅಭಿಯಾನ ಮುಗಿಯುತ್ತಿದ್ದಂತೆಯೇ ತೆರೆದ ವಯಲ್ಗಳನ್ನು ಬಿಸಾಡಬೇಕು ಎಂದೇನಿಲ್ಲ. ಇದನ್ನು ನೀವು 28 ದಿನಗಳವರೆಗೆ ಸಂಗ್ರಹಿಸಿ ಇಡಬಹುದಾಗಿದೆ. ಈ ರೀತಿ ಮಾಡುವುದರಿಂದ ಲಸಿಕೆ ವ್ಯರ್ಥವಾಗುವುದನ್ನು ತಡೆಯಬಹುದಾಗಿದೆ. ಕಳೆದ ತಿಂಗಳು ಹೈದರಾಬಾದ್ ಮೂಲಕ ಭಾರತ್ ಬಯೋಟೆಕ್ ಕಂಪನಿಯು ಕೊವ್ಯಾಕ್ಸಿನ್ ಲಸಿಕೆಯ ಜೀವಿತಾವಧಿಯನ್ನು ವಿಸ್ತರಿಸಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ನಿಂದ ಅನುಮೋದನೆಯನ್ನು ಪಡೆದಿತ್ತು.
ದೇಶದಲ್ಲಿ ಅನೇಕ ತಿಂಗಳುಗಳ ಹಿಂದೆಯೇ ಅನೇಕ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದ್ದರೂ ಸಹ ಇವುಗಳಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗಳನ್ನು 138 ಡೋಸ್ಗೂ ಹೆಚ್ಚು ಬಾರಿ ನೀಡಲಾಗಿದೆ. ಕೋವಿನ್ ಡ್ಯಾಶ್ಬೋರ್ಡ್ ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಸುಮಾರು 15 ಕೋಟಿ ಡೋಸ್ ಕೋವ್ಯಾಕ್ಸಿನ್ನ್ನು ದೇಶದಲ್ಲಿ ನೀಡಲಾಗಿದೆ.