ತುಳಸಿ ಗಿಡದ ಮಹತ್ವ ತಿಳಿಯದವರಿಲ್ಲ. ನೆಗಡಿ, ಜ್ವರ, ಕೆಮ್ಮಿನಂಥ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಯಾನ್ಸರ್ ನಂತ ಮಹಾಮಾರಿಗೂ ತುಳಸಿ ಮದ್ದಾಗಬಲ್ಲದು ಎಂಬುದನ್ನು ಆಯುರ್ವೇದ ದೃಢಪಡಿಸಿದೆ.
ತುಳಸಿಯನ್ನು ಹಾಲಿನೊಂದಿಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಬಹಳ ಒಳ್ಳೆಯದು. ಅನೇಕ ರೋಗಗಳಿಗೆ ಇದು ಮದ್ದು. ಇವೆರಡರಲ್ಲೂ ಆಂಟಿಬಯೋಟಿಕ್ ಹಾಗೂ ಆಂಟಿಆಕ್ಸಿಡೆಂಟ್ ಗುಣವಿದೆ. ಹಾಲಿನಲ್ಲಿ ಪೋಷಕಾಂಶಗಳು ಇವೆ. ಇದರಿಂದ ಪ್ರತಿರಕ್ಷಣಾ ಶಕ್ತಿ ಹೆಚ್ಚಾಗುತ್ತದೆ.
ಕೀಳರಿಮೆ ಹೋಗಲಾಡಿಸಿ ನರ ಮಂಡಲವನ್ನು ಸಮತೋಲನದಲ್ಲಿ ಇಡುತ್ತದೆ. ಒತ್ತಡವನ್ನು ಉಂಟು ಮಾಡುವ ಹಾರ್ಮೋನ್ ಗಳನ್ನು ನಿಯಂತ್ರಿಸುತ್ತದೆ. ಆಗಾಗ ಕಾಣಿಸಿಕೊಳ್ಳುವ ತಲೆನೋವನ್ನು ಸಹ ಕಡಿಮೆ ಮಾಡುತ್ತದೆ.
ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ತುಳಸಿಯನ್ನು ಹಾಲಿನೊಂದಿಗೆ ಸೇವನೆ ಮಾಡುತ್ತ ಬರುವುದರಿಂದ ಅಸ್ತಮಾದಂತಹ ಕಾಯಿಲೆಗಳು ದೂರವಾಗುತ್ತವೆ. ಮೂತ್ರ ಪಿಂಡದಲ್ಲಿ ಕಲ್ಲು ಬೆಳೆಯುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ತುಳಸಿಯನ್ನು ಹಾಲಿನೊಂದಿಗೆ ಸೇವನೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಲ್ಲು ಕರಗಿ ಹೋಗುತ್ತದೆ.