alex Certify ತುಂಬಾ ಬೇಜಾರಿನಲ್ಲಿದ್ದೀರಾ ? ಹಾಗಿದ್ರೆ ಈ ವಿಡಿಯೋ ನೋಡಿ ಖುಷಿಯಾಗಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಬಾ ಬೇಜಾರಿನಲ್ಲಿದ್ದೀರಾ ? ಹಾಗಿದ್ರೆ ಈ ವಿಡಿಯೋ ನೋಡಿ ಖುಷಿಯಾಗಿರಿ

ಬೆಳಗ್ಗೆ ಎದ್ದು, ರೆಡಿ ಆಗಿ ತಿಂಡಿ ತಿಂದು ಕೆಲಸಕ್ಕೆ ಹೋಗುವುದು, ನಂತರ ಹಿಂತಿರುಗುವುದು. ಹೀಗೆ ಹಲವರ ಜೀವನ ಪ್ರತಿದಿನ ಸಾಗುತ್ತದೆ. ವಾರದ ರಜೆ ಬಂತೆಂದರೆ ಸಾಕು ಮನೆಯಲ್ಲೇ ನೂರಾರು ಕೆಲಸಗಳಿರುತ್ತವೆ. ಇನ್ನೇನು ಮೋಜು ಮಾಡುವುದು ಬೇಕಲ್ಲವೇ ? ಇದು ತಮ್ಮ ಕನಸುಗಳನ್ನು ಸಾಧಿಸಲು ಊರನ್ನು ತೊರೆದು ಪಟ್ಟಣ ಸೇರಿಕೊಂಡವರ ಪ್ರತಿದಿನದ ಕತೆ.

ಒತ್ತಡ, ಒಂಟಿತನ, ಕೆಲಸದ ನಡುವೆ ನಮಗೂ ಮೋಜು-ಮಸ್ತಿ ಬೇಕಲ್ಲವೇ ? ಅದಕ್ಕಾಗಿಯೇ ಇಂಟರ್ನೆಟ್ ನಲ್ಲಿ ನಗಿಸುವ ಹಲವಾರು ವಿಡಿಯೋಗಳು ಸಿಗುತ್ತವೆ. ಈ ಕ್ಷಣ ನಿಮಗೆ ನಗು ತರಿಸುವ ವಿಡಿಯೋವೊಂದು ಇಲ್ಲಿದೆ. ತನ್ನನ್ನು ತಾನು ಪ್ರೀತಿಸುವುದೆಂದರೇನು ಅನ್ನೋದು ಈ ವಿಡಿಯೋ ನೋಡಿದ್ರೆ ನಿಮಗೆ ತಿಳಿಯುತ್ತದೆ.

ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಸುತ್ತಲೂ ಇರುವ ಜನರು ಜೊತೆಗಾರರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಒಂಟಿಯಾಗಿರುವ ವ್ಯಕ್ತಿಯೊಬ್ಬರು ತಾನು ಒಬ್ಬನೇ ಇದ್ದಿನಲ್ಲ ಎಂದು ಬೇಸರಿಸಿಕೊಳ್ಳದೆ ಹಾಡಿಗೆ ಡಾನ್ಸ್ ಮಾಡುತ್ತಾ ತಮ್ಮ ಕಂಪನಿಯನ್ನು ತಾವೇ ಆನಂದಿಸಿದ್ದಾರೆ.

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಆತ್ಮವಿಶ್ವಾಸ ಕಳೆದುಕೊಂಡವರು ಈ ವಿಡಿಯೋ ನೋಡಿದ್ರೆ ಖಂಡಿತಾ ಜೀವನದಲ್ಲಿ ಏನೋ ಸಾಧಿಸಬೇಕು ಅನ್ನೋ ವಿಶ್ವಾಸ ಬರುತ್ತದೆ ಅಂತೆಲ್ಲಾ ಹಲವರು ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು ಅಂತಾ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

https://twitter.com/swatic12/status/1677268629853798400?ref_src=twsrc%5Etfw%7Ctwcamp%5Etweetembed%7Ctwterm%5E1677268629853798400%7Ctwgr%5E91638c9b333549ac3451c12b0553c1145d2616a5%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-mans-carefree-dance-at-a-concert-is-the-kind-of-vibe-you-need-to-have-in-your-life-watch-2403498-2023-07-07

https://twitter.com/PulkitK107/status/1677270160829480961?ref_src=twsrc%5Etfw%7Ctwcamp%5Etweetembed%7Ctwterm%5E1677270160829480961%7Ctwgr%5E91638c9b333549ac3451c12b0553c1145d2616a5%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-mans-carefree-dance-at-a-concert-is-the-kind-of-vibe-you-need-to-have-in-your-life-watch-2403498-2023-07-07

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...