ಓಟ್ಸ್ ಆರೋಗ್ಯದಾಯಕ, ಪುಷ್ಠಿದಾಯಕ. ಓಟ್ಸ್ ಫ್ಲೇಕ್ಸ್ ಹಾಗೆಯೇ ಬೇಯಿಸಿ ಹಣ್ಣುಗಳೊಂದಿಗೆ ಸೇವಿಸುವುದು ಆರೋಗ್ಯಕರ. ಓಟ್ಸ್ ಪಾಲಕ್ ಸೊಪ್ಪಿನ ರೊಟ್ಟಿ, ರುಚಿ ಜೊತೆಗೆ ದೇಹಕ್ಕೆ ಪೂರಕವಾದ ಪೌಷ್ಟಿಕಾಂಶಗಳನ್ನು ದೊರಕಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು: ಓಟ್ಸ್ ಪುಡಿ 1 ಕಪ್, ಪಾಲಕ್ ಸೊಪ್ಪು ಅರ್ಧ ಕಪ್, ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ 2 ಚಮಚ.
ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು, ಗೋಧಿ ಹಿಟ್ಟು, ಓಟ್ಸ್ ಪುಡಿ, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲೆಸಿ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಮೇಲೆ ಎಣ್ಣೆ ಸವರಿ ಕಲಸಿಟ್ಟ ಹಿಟ್ಟಿನಿಂದ ರೊಟ್ಟಿ ತಟ್ಟಿ ತವಾದಲ್ಲಿ ಎಣ್ಣೆ ಹಾಕಿ ಬೇಯಿಸಿದರೆ ರುಚಿಯಾದ, ಆರೋಗ್ಯಕರವಾದ ಓಟ್ಸ್ ಪಾಲಕ್ ರೊಟ್ಟಿ ತಿನ್ನಲು ಸಿದ್ದ.