ಅನುರಾಗ್ ಕಶ್ಯಪ್ ನಿರ್ದೇಶನದ ಹೊಸ ಚಲನಚಿತ್ರ ‘ದುಬಾರಾ’ ಪೈರಸಿ ಹೊಡೆತಕ್ಕೆ ಸಿಲುಕಿ ಬೇಕಾಬಿಟ್ಟಿಯಾಗಿ ವೈರಲ್ ಆಗಿದೆ. ತಾಪ್ಸಿ ಪನ್ನು ಮತ್ತು ಪಾವೈಲ್ ಗುಲಾಟಿ ನಟಿಸಿರುವ ಚಿತ್ರ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಮಿಸ್ಟರಿ-ಥ್ರಿಲ್ಲರ್ ಆಗಿರುವ ಈ ಚಿತ್ರ ಥಿಯೇಟರ್ಗಳಿಗೆ ಬಂದ ಒಂದು ದಿನದ ನಂತರ ಪೈರಸಿಗೆ ಸಿಲುಕಿದೆ.
ತಮಿಳುರಾಕರ್ಸ್, ಮೂವಿರುಲೆಜ್ ಮತ್ತು ಟೆಲಿಗ್ರಾಮ್ನಂತಹ ವೇದಿಕೆಗಳಲ್ಲಿ ಇಡೀ ಚಲನಚಿತ್ರ ಲಭ್ಯವಿದ್ದು, ಚಿತ್ರವನ್ನು ಡೌನ್ಲೋಡ್ ಮಾಡಲಾಗುತ್ತಿದ್ದು, ವೇಗವಾಗಿ ಶೇರ್ ಆಗುತ್ತಿದೆ. ಸಹಜವಾಗಿ ಇದು ಚಿತ್ರ ನಿರ್ಮಾಪಕರಿಗೆ ಆಘಾತ ತಂದಿದೆ
ದುಬಾರ ಚಿತ್ರಕಥೆಗಾಗಿ ಪ್ರಶಂಸಿಸಲ್ಪಟ್ಟಿದೆಯಾದರೂ ಪ್ರೇಕ್ಷಕರಲ್ಲಿ ಯಾವುದೇ ಕುತೂಹಲ ಉಂಟುಮಾಡುವಲ್ಲಿ ವಿಫಲವಾಗಿದೆ. ವರದಿಗಳ ಪ್ರಕಾರ, ಚಿತ್ರವು ತನ್ನ ಆರಂಭಿಕ ದಿನದಂದು ಅತ್ಯಂತ ಕಳಪೆ ಸಾಧನೆ ಮಾಡಿದ್ದು, ಚಿತ್ರಮಂದಿರಗಳಲ್ಲಿ ಕೇವಲ 2-3 ಪ್ರತಿಶತದಷ್ಟು ಆಕ್ಯುಪೆನ್ಸಿ ಇತ್ತು. ಇದೀಗ ಆನ್ಲೈನ್ನಲ್ಲಿ ಚಿತ್ರ ಲೀಕ್ ಆಗಿರುವುದರಿಂದ ಗಳಿಕೆ ಮತ್ತಷ್ಟು ಕುಗ್ಗುವ ಸಾಧ್ಯತೆ ಇದೆ.
ಈ ಹಿಂದೆ ‘ವಿಕ್ರಾಂತ್ ರೋಣಾ’, ‘ಜಗ್ ಜಗ್ ಜೀಯೋ’, ‘ಶೀ 2’, ‘ಭೂಲ್ ಭುಲೈಯಾ 2’, ‘ಸರ್ಕಾರಿ ವಾರಿಪಾಟ’, ‘ಕೆಜಿಎಫ್ 2’, ‘ಆರ್ಆರ್ಆರ್’, ‘ಆಚಾರ್ಯ’, ‘ಸ್ಟ್ರೇಂಜರ್ ಥಿಂಗ್ಸ್ ಸೀಸನ್ 4’ ಚಿತ್ರಗಳು ಪೈರಸಿ ಹೊಡೆತಕ್ಕೆ ಸಿಲುಕಿತ್ತು.
ಈ ನಡುವೆ ಬಾಲಿವುಡ್ನಲ್ಲಿ ಬಾಯ್ಕಾಟ್ ಗದ್ದಲ ಜೋರಾಗಿದ್ದು, ಚಿತ್ರದ ಇತ್ತೀಚಿನ ಪ್ರಚಾರ ಕಾರ್ಯಕ್ರಮಮೊಂದರಲ್ಲಿ, ತಾಪ್ಸಿ ಮತ್ತು ಅನುರಾಗ್ ಕಶ್ಯಪ್ ‘ದುಬಾರಾ’ವನ್ನು ಬಹಿಷ್ಕರಿಸುವಂತೆ ಜನರನ್ನು ತಮಾಷೆಯಾಗಿ ಕೇಳಿದ್ದರು.
“ದಯವಿಟ್ಟು ಎಲ್ಲರೂ ನಮ್ಮ ಚಿತ್ರವಾದ ‘ದುಬಾರಾ’ವನ್ನು ಬಹಿಷ್ಕರಿಸಿ. ನಾನು ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಮತ್ತು ಅಕ್ಷಯ್ ಕುಮಾರ್ ಅವರ ‘ರಕ್ಷಾ ಬಂಧನ’ದಂತೆಯೇ ಅದೇ ಲೀಗ್ನಲ್ಲಿ ಇರಲು ಬಯಸುತ್ತೇನೆ ಎಂದುಹೇಳಿಕೊಂಡಿದ್ದು. ಇದಕ್ಕೆ ಪೂರಕವಾಗಿ ಅನುರಾಗ್ ಕೂಡ, “ಹೌದು ದಯವಿಟ್ಟು, ನಮ್ಮ ಚಿತ್ರವೂ ಬಹಿಷ್ಕಾರದ ಹ್ಯಾಶ್ಟ್ಯಾಗ್ನಲ್ಲಿ ಟ್ರೆಂಡ್ ಆಗಬೇಕೆಂದು ನಾನು ಬಯಸುತ್ತೇನೆ. ಬಹಿಷ್ಕಾರಕ್ಕೆ ಕರೆ ನೀಡುವವರು ಥಿಯೇಟರ್ಗಳಲ್ಲಿ ಚಲನಚಿತ್ರಗಳನ್ನು ನೋಡುವವರೇ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ” ಎಂದು ಕೆಣಕಿದ್ದರು.
ವರದಿಗಳ ಪ್ರಕಾರ 50 ಕೋಟಿ ಬಜೆಟ್ನಲ್ಲಿ ತಯಾರಾದ ‘ದುಬಾರ’ ಮೊದಲ ದಿನ 72 ಲಕ್ಷ ರೂ.ಗಳನ್ನಷ್ಟೇ ಗಳಿಸಿದೆ.