alex Certify ತಾಜಾ ಅಥವಾ ಒಣ ಖರ್ಜೂರ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಜಾ ಅಥವಾ ಒಣ ಖರ್ಜೂರ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ…..?

ಖರ್ಜೂರ ರುಚಿ ಮತ್ತು ಆರೋಗ್ಯ ಎರಡಕ್ಕೂ ಸೈ ಎನಿಸಿಕೊಂಡಿರೋ ಹಣ್ಣು. ಸಿಹಿಭರಿತ ಪೋಷಕಾಂಶಗಳಿಂದ ತುಂಬಿರುವ ಖರ್ಜೂರವನ್ನು ಎಲ್ಲರೂ ಇಷ್ಟಪಡುತ್ತಾರೆ. ಕ್ಯಾಲೋರಿಭರಿತ ಸ್ನಾಕ್‌ ತಿನ್ನುವುದಕ್ಕಿಂತ ಖರ್ಜೂರವನ್ನು ಸೇವಿಸುವುದು ಬೆಸ್ಟ್‌. ಖರ್ಜೂರದಲ್ಲಿ ಒಣ ಖರ್ಜೂರಗಳು ಮತ್ತು ತಾಜಾ ಖರ್ಜೂರಗಳು ಲಭ್ಯವಿವೆ. ಇವೆರಡರ ನಡುವಣ ವ್ಯತ್ಯಾಸವೇನು? ಇವುಗಳಲ್ಲಿ ಯಾವುದು ಉತ್ತಮ ಎಂಬುದನ್ನು ತಿಳಿಯೋಣ.

ಚೆನ್ನಾಗಿ ಮಾಗಿದ ಖರ್ಜೂರಗಳನ್ನು ಕಿತ್ತು ಸ್ವಲ್ಪ ಸಮಯ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ವಿಧಗಳಲ್ಲಿ ಖರ್ಜೂರವನ್ನು ಸೇವಿಸಲಾಗುತ್ತದೆ. ಬ್ರಿಟನ್‌ನಲ್ಲಿ ಖರ್ಜೂರವನ್ನು ಕತ್ತರಿಸಿ ಸಾಂಪ್ರದಾಯಿಕ ಮಿಠಾಯಿ ಫುಡಿಂಗ್ ಅಥವಾ ಕ್ರಿಸ್ಮಸ್ ಫುಡಿಂಗ್‌ಗೆ ಸೇರಿಸಲಾಗುತ್ತದೆ. ಖರ್ಜೂರವನ್ನು ಬೇಕನ್‌ನಲ್ಲಿ ಸುತ್ತಿ ಹುರಿಯಲಾಗುತ್ತದೆ. ಇಸ್ರೇಲ್‌ನಲ್ಲಿ ಸಿಲಾನ್ ಎಂಬ ಖರ್ಜೂರದ ಸಿರಪ್ ಇದೆ. ಚಿಕನ್‌ ಡಿಶ್‌ಗಳನ್ನು ಮತ್ತಷ್ಟು ರುಚಿಕರವಾಗಿಸಲು ಜೇನುತುಪ್ಪದ ಬದಲು ಖರ್ಜೂರವನ್ನು ಅನೇಕ ದೇಶಗಳಲ್ಲಿ ಬಳಸಲಾಗುತ್ತದೆ.

ಖಲಾಲ್ ಖರ್ಜೂರವನ್ನು ಡ್ರೈ ಖರ್ಜೂರ ಎಂದೂ ಕರೆಯುತ್ತಾರೆ. ಚುಹರಾ ಎಂಬ ಹೆಸರಿನಿಂದ ಇದು ಜನಪ್ರಿಯ. ಅದನ್ನು ಮರದಿಂದ ಕಚ್ಚಾ ಕಿತ್ತು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಖರ್ಜೂರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವುಗಳನ್ನು ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವಿನ ಕೆಲವು ದಿನಗಳಲ್ಲಿ ಮಾತ್ರ ಕೊಯ್ಲು ಮಾಡಲಾಗುತ್ತದೆ. ರುಟಾಬ್ ಖರ್ಜೂರಗಳು ಮಾಗಿದ ತಾಜಾ ಡೇಟ್ಸ್‌. ಸಂಪೂರ್ಣವಾಗಿ ಮಾಗಿದಾಗ ಖರ್ಜೂರದ ಬಣ್ಣ ಬದಲಾಗುತ್ತದೆ. ರುಚಿ ಕೂಡ ಬದಲಾಗುತ್ತದೆ. ಅದನ್ನು ರುಟಾಬ್ ಡೇಟ್ಸ್‌ ಎಂದು ಕರೆಯಲಾಗುತ್ತದೆ.

ಮಾಗಿದ ಬಳಿಕ ಖರ್ಜೂರ ಕಂದು ಬಣ್ಣಕ್ಕೆ ತಿರುಗುತ್ತದೆ. ಕುಗ್ಗಲು ಪ್ರಾರಂಭಿಸುತ್ತದೆ. ಮಾಗಿದ ಖರ್ಜೂರದಲ್ಲಿ ತೇವಾಂಶವು ಕೇವಲ 50-70 ಪ್ರತಿಶತದಷ್ಟಿರುತ್ತದೆ. ಅವು ಮೃದು ಮತ್ತು ಅತ್ಯಂತ ರಸಭರಿತವಾಗುತ್ತವೆ. ಮಾಗಿದ ಖರ್ಜೂರದ ಸಿಹಿಯೂ ಸಹ ಬಹಳಷ್ಟು ಹೆಚ್ಚಾಗುತ್ತದೆ. ಈ ಖರ್ಜೂರಗಳು ಬಹುಬೇಗ ಹಾಳಾಗುತ್ತವೆ. ಅವುಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ 2 ವರ್ಷಗಳವರೆಗೆ ಬಳಸಬಹುದು.  ಆರೋಗ್ಯದ ದೃಷ್ಟಿಯಿಂದ ಎರಡೂ ಬಗೆಯ ಖರ್ಜೂರಗಳು ಉತ್ತಮ. ಖಾಲಿ ಹೊಟ್ಟೆಯಲ್ಲಿ ಅಥವಾ ಸಂಜೆ ಸ್ನಾಕ್ಸ್‌ಗೆ ಇವುಗಳನ್ನು ಆರಾಮವಾಗಿ ತಿನ್ನಬಹುದು. ಹಾಲಿನೊಂದಿಗೆ ಖರ್ಜೂರವನ್ನು ಸೇವಿಸಿ, ಇದು ಆರೋಗ್ಯಕ್ಕೆ ಪ್ರಯೋಜನಕಾರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...