alex Certify ತಾಂಜೇನಿಯಾದ ಇಂಟರ್ನೆಟ್ ಸೆನ್ಸೇಷನ್‍ಗೂ ಹಬ್ಬಿತು ‘ಕೆಜಿಎಫ್-2’ ಜ್ವರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಂಜೇನಿಯಾದ ಇಂಟರ್ನೆಟ್ ಸೆನ್ಸೇಷನ್‍ಗೂ ಹಬ್ಬಿತು ‘ಕೆಜಿಎಫ್-2’ ಜ್ವರ..!

ಒಂದು ವೇಳೆ ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್ ಅವರ ವಿಡಿಯೋಗಳನ್ನು ನೋಡಿರಬಹುದು. ಅವರು ಜನಪ್ರಿಯ ಭಾರತೀಯ ಸಿನಿಮಾಗಳ ಹಾಡುಗಳಿಗೆ ನೃತ್ಯ ಮಾಡುವ ಮೂಲಕ, ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಖ್ಯಾತರಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಅವರು ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ.

ಇದೀಗ ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ  ಕನ್ನಡ ಸಿನಿಮಾವಾದ ಕೆಜಿಎಫ್-2 ಜ್ವರ ಆವರಿಸಿದೆ. ಇದೀಗ ಕಿಲಿ ಪೌಲ್ ಕೆಜಿಎಫ್-2 ಸಿನಿಮಾದ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ್ದಾರೆ. ಸಾಂಪ್ರದಾಯಿಕ ಮಸಾಯ್ ಉಡುಪಿನ ಬದಲು ಕಪ್ಪು ಸೂಟ್ ಮತ್ತು ಬಿಳಿ ಶರ್ಟ್ ಧರಿಸಿದ್ದಾರೆ. ಈ ಮೂಲಕ ನಟ ಯಶ್ ಅವರ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ್ದಾರೆ.

ಹಿಂಸೆ, ತಾನು ಅದನ್ನು ಇಷ್ಟಪಡುವುದಿಲ್ಲ ಎಂಬ ಸಂಭಾಷಣೆಗೆ ಕಿಲಿ ಲಿಪ್ ಸಿಂಕ್ ಮಾಡಿದ್ದಾರೆ. ನಂತರ, ಕಿಲಿ ತನ್ನ ಸಹೋದರಿ ನೀಮಾ ಪೌಲ್ ಹೊಡೆಯುವ ನಟನೆ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಸದ್ಯ, ಈ ವಿಡಿಯೋ ಸಖತ್ ಸದ್ದು ಮಾಡುತ್ತಿದ್ದು, 2.2  ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...