ಪನ್ನೀರ್ ಎಂದರೆ ಎಲ್ಲರಿಗೂ ಇಷ್ಟ. ಇದರಿಂದ ನಾನಾ ಬಗೆಯ ಅಡುಗೆ ಮಾಡುತ್ತಾರೆ. ಪ್ರೋಟಿನ್ ಕೂಡ ಹೆಚ್ಚು ಇರುತ್ತದೆ. ಇಲ್ಲಿ ರುಚಿಕರವಾದ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್- ಪನ್ನೀರ್, 1 ಟೇಬಲ್ ಸ್ಪೂನ್- ಮೆಲನ್ ಸೀಡ್ಸ್, 3 ಟೇಬಲ್ ಸ್ಪೂನ್- ಗೋಡಂಬಿ, 1 ಟೇಬಲ್ ಸ್ಪೂನ್- ಗಸಗಸೆ, ¼ ಕಪ್- ಕ್ರೀಂ, 2 ಟೇಬಲ್ ಸ್ಪೂನ್- ಹಾಲು, 2 ಟೇಬಲ್ ಸ್ಪೂನ್- ಬೆಣ್ಣೆ, 1 ಟೀ ಸ್ಪೂನ್- ಕಾಳುಮೆಣಸಿನ ಪುಡಿ, 1 ಟೀ ಸ್ಪೂನ್- ಗರಂ ಮಸಾಲ, 1 ಟೀ ಸ್ಪೂನ್- ಹಸಿಮೆಣಸಿನ ಪೇಸ್ಟ್, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ- ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಮೆಲನ್ ಸೀಡ್ಸ್, ಗೋಡಂಬಿ, ಗಸಗಸೆ ಹಾಕಿ ಪುಡಿ ಮಾಡಿಕೊಂಡು ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ನಂತರ ಇದಕ್ಕೆ ಕ್ರೀಂ, ಹಾಲು, ಬೆಣ್ಣೆ, ಕಾಳುಮೆಣಸಿನ ಪುಡಿ, ಗರಂ ಮಸಾಲ, ಹಸಿಮೆಣಸಿನ ಪೇಸ್ಟ್ , ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದಕ್ಕೆ ಪನ್ನೀರ್ ಹಾಕಿ ಮಿಶ್ರಣ ಮಾಡಿಕೊಂಡು 2 ಗಂಟೆಗಳ ಹೊತ್ತು ಹಾಗೆಯೇ ಬಿಡಿ.
ನಾನ್ ಸ್ಟಿಕ್ ತವಾಕ್ಕೆ ಎಣ್ಣೆ ಸವರಿಕೊಂಡು ಪನ್ನೀರ್ ಅನ್ನು ಅದರ ಮೇಲೆ ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರಗೆ ಫ್ರೈ ಮಾಡಿಕೊಂಡು ತಕ್ಷಣ ಸರ್ವ್ ಮಾಡಿ.