ಸೆರೆಂಡಿಪಿಟಿ ರೆಸ್ಟಾರೆಂಟ್ ಚಿನ್ನದ ಡಸ್ಟ್ಗಳನ್ನು ಹೊಂದಿರುವ ಫ್ರೆಂಚ್ ಫ್ರೈಸ್ಗಳನ್ನು ತಯಾರಿಸಿದ್ದು ಇದಕ್ಕೆ ಕ್ರೆಮ್ ಡೆಲಾ ಕ್ರೀಮ್ ಪೊಮ್ಮೆಸ್ ಫ್ರೈಟ್ಸ್ ಎಂದು ಹೆಸರಿಟ್ಟಿದೆ. ಇವುಗಳ ಬೆಲೆ ಬರೋಬ್ಬರಿ 200 ಡಾಲರ್ ಆಗಿದೆ.
2021ರಲ್ಲಿ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಇದನ್ನು ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್ ಎಂದು ಕರೆಯಲಾಗಿದೆ. ಇತ್ತೀಚೆಗಷ್ಟೇ ಕಂಪನಿಯು ಶೇರ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಕೂಡ ಫ್ರೆಂಚ್ಫ್ರೈಸ್ ತಯಾರಿಸಲು ಬಳಸಲಾದ ಪದಾರ್ಥಗಳನ್ನು ಹಂಚಿಕೊಂಡಿದೆ. ಇದರಲ್ಲಿ 2006 ಡೊಮ್ ಪೆರಿಗ್ನಾನ್ ಷಾಂಪೇನ್, ಜೆ ಲೆಬ್ಲಾಂಕ್ ಫ್ರೆಂಚ್ ಷಾಂಪೇನ್, ಫ್ರಾನ್ಸ್ನ ಶುದ್ಧ ಪಂಜರ-ಮುಕ್ತ ಗೂಸ್ ಕೊಬ್ಬುನ್ನು ಬಳಸಲಾಗಿದೆ. ಹಾಗೂ ಇದನ್ನು 23 ಕ್ಯಾರಟ್ ಚಿನ್ನದ ಡಸ್ಟ್ನಿಂದ ಟಾಪಿಂಗ್ ಮಾಡಲಾಗಿದೆ.