ಅತಿಯಾದ ಮೊಬೈಲ್ ಬಳಕೆ, ಹೆಚ್ಚಿನ ಕಂಪ್ಯೂಟರ್ ವೀಕ್ಷಣೆಯಿಂದ ಹಾಗು ನಿದ್ದೆಯ ಕೊರತೆಯಿಂದ ತಲೆನೋವು ಸಮಸ್ಯೆ ಬಿಡದೆ ಕಾಡುತ್ತದೆ. ಇದನ್ನು ಮನೆ ಮದ್ದುಗಳ ಮೂಲಕ ಪರಿಹರಿಸಿಕೊಳ್ಳಬಹುದು.
ತಲೆನೋವು ಬಂದಾಗ ಯಾವುದೇ ಕೆಲಸವಿದ್ದರೂ ಅದನ್ನು ಪಕ್ಕಕ್ಕಿಟ್ಟು ನಿದ್ದೆ ಮಾಡಲು ಪ್ರಯತ್ನಿಸಿ. ವಿಶ್ರಾಂತಿಯಿಂದ ಆಯಾಸ ಮತ್ತು ತಲೆ ನೋವು ಕಡಿಮೆಯಾಗುತ್ತದೆ.
ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿ. ರಾತ್ರಿ ಮಲಗುವ ವಾರಕ್ಕೆ ಎರಡು ಬಾರಿಯಾದರೂ ತಲೆಗೆ ತೆಂಗಿನೆಣ್ಣೆ ಹಾಕಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಮಸಾಜ್ ಮಾಡಿ.
ಕುತ್ತಿಗೆಯ ಭಾಗಕ್ಕೆ ಐಸ್ ನಿಂದ ಮಸಾಜ್ ಮಾಡಿ. ಕ್ರಮೇಣ ಹಣೆ, ಕತ್ತು, ಕಿವಿ ಭಾಗಕ್ಕೂ ಮಸಾಜ್ ಮಾಡಿ. ಶುಂಠಿ ಹಾಗೂ ನಿಂಬೆರಸ ಬೆರೆಸಿದ ಬೆಚ್ಚಗಿನ ನೀರು ಸೇವಿಸಿ.
ಮಸಾಲೆ ಚಹಾ ಕುಡಿಯುವುದರಿಂದಲೂ ತಲೆನೋವು ಮತ್ತು ಕಟ್ಟಿದ ಮೂಗಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇದು ಮೆದುಳನ್ನು ಚುರುಕುಗೊಳಿಸುತ್ತದೆ. ನೋವನ್ನು ದೂರ ಮಾಡುತ್ತದೆ.