alex Certify ತರಾತುರಿಯಲ್ಲಿ ಊಟ, ಉಪಹಾರ ತಿನ್ನುವ ಅಭ್ಯಾಸವಿದೆಯೇ ? ಇದು ಅಪಾಯಕಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಾತುರಿಯಲ್ಲಿ ಊಟ, ಉಪಹಾರ ತಿನ್ನುವ ಅಭ್ಯಾಸವಿದೆಯೇ ? ಇದು ಅಪಾಯಕಾರಿ…!

ಊಟವನ್ನು ಮೆಲ್ಲಗೆ ತಿನ್ನಬೇಕು, ಜಗಿಯಬೇಕು ಎಂಬುದನ್ನು  ಹಿರಿಯರಿಂದ ಆಗಾಗ ಕೇಳಿದ್ದೇವೆ. ಆದರೆ ಇಂದಿನ ಧಾವಂತದ ಬದುಕಿನಲ್ಲಿ ಹೆಚ್ಚಿನವರಿಗೆ ಸಮಯ ಸಿಗುತ್ತಿಲ್ಲ. ಹಾಗಾಗಿ ಊಟ ಮಾಡುವ ಕೆಲಸವನ್ನು ಬೇಗ ಮುಗಿಸಿಬಿಡುತ್ತಾರೆ.

ಬೆಳಗ್ಗೆ ಸಮಯಕ್ಕೆ ಸರಿಯಾಗಿ ಆಫೀಸ್‌ಗೆ ಹೋಗುವ ಆತುರದಲ್ಲಿ  ಆಹಾರವನ್ನು ಸರಿಯಾಗಿ ಅಗಿಯದೇ ನುಂಗಿಬಿಡುತ್ತಾರೆ. ಊಟದ ವಿರಾಮದಲ್ಲೂ ಆತುರವಾಗಿ ತಿಂದುಬಿಡುತ್ತಾರೆ. ಹೀಗೆ ಮಾಡುವುದರಿಂದ ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ.

ತಿನ್ನಲು ಎಷ್ಟು ಸಮಯ ತೆಗೆದುಕೊಳ್ಳಬೇಕು?

ಆರೋಗ್ಯವಾಗಿರಲು ಬಯಸಿದರೆ ಊಟ ಮಾಡಲು 25 ರಿಂದ 30 ನಿಮಿಷಗಳ ಸಮಯ ತೆಗೆದುಕೊಳ್ಳಬೇಕು. ಸಂಪೂರ್ಣ ಆರಾಮವಾಗಿ ಅಗಿದು ನಿಧಾನವಾಗಿ ತಿನ್ನಬೇಕು. ಒಂದು ತುತ್ತನ್ನು 20 ರಿಂದ 30 ಬಾರಿ ಅಗಿಯಲು ಸಲಹೆ ನೀಡಲಾಗುತ್ತದೆ.

ತುಂಬಾ ವೇಗವಾಗಿ ತಿನ್ನುವುದರಿಂದ ಆಗುವ ಅನಾನುಕೂಲಗಳು !

ಬುಲೆಟ್ ಟ್ರೈನ್‌ನ ವೇಗದಲ್ಲಿ ಊಟವನ್ನು ಪೂರ್ಣಗೊಳಿಸಿದರೆ, ಆಹಾರ ಗಂಟಲಿಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಅದು ವಿಂಡ್‌ ಪೈಪ್‌ನಲ್ಲಿ ಸಿಲುಕಿ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ತರಾತುರಿಯಲ್ಲಿ ಆಹಾರವನ್ನು ಸೇವಿಸಿದರೆ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಸಂಪೂರ್ಣವಾಗಿ ಜಗಿದು ತಿಂದರೆ ಜೀರ್ಣಾಂಗ ವ್ಯವಸ್ಥೆಯ ಕೆಲಸವು ಹೆಚ್ಚು ಸುಲಭವಾಗುತ್ತದೆ.

ಗಬಗಬನೆ ತಿನ್ನುವುದರಿಂದ ಅಜೀರ್ಣ, ಮಲಬದ್ಧತೆ, ಗ್ಯಾಸ್, ಎದೆಯುರಿ, ಆಮ್ಲೀಯತೆಯಂತಹ ಸಮಸ್ಯೆಗಳು ಉಂಟಾಗಬಹುದು. ಇದು ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಆಹಾರವನ್ನು ಅಗಿಯುವುದು ನಿಮ್ಮ ಹೊಟ್ಟೆಯ ಕೆಲಸವನ್ನು ಸುಲಭಗೊಳಿಸುತ್ತದೆ ಎಂಬುದನ್ನು ನೆನಪಿಡಿ. ವೇಗವಾಗಿ ತಿನ್ನುವುದರಿಂದ ತೂಕವು ಅಷ್ಟೇ ವೇಗವಾಗಿ ಹೆಚ್ಚಾಗುತ್ತದೆ.

ಈ ಕೆಟ್ಟ ಅಭ್ಯಾಸ ಮುಂದುವರಿದರೆ ಹೊಟ್ಟೆ ಮತ್ತು ಸೊಂಟದ ಮೇಲೆ ಅದರ ಪರಿಣಾಮವು ಸ್ಪಷ್ಟವಾಗಿ ಗೋಚರಿಸುತ್ತದೆ. ವೇಗವಾಗಿ ತಿನ್ನುವ  ಅಭ್ಯಾಸ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಈ ಅಭ್ಯಾಸವು ಇನ್ಸುಲಿನ್ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ.

ಆತುರಾತುರವಾಗಿ ಊಟ ಮಾಡುವುದರಿಂದ ಮೆಟಬಾಲಿಕ್ ಸಿಂಡ್ರೋಮ್‌ಗೆ ತುತ್ತಾಗಬಹುದು. ಇದರಿಂದಾಗಿ ರಕ್ತದೊತ್ತಡವು ನಿಯಂತ್ರಣ ಕಳೆದುಕೊಳ್ಳುತ್ತದೆ. ಪರಿಣಾಮ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...