alex Certify ತಮಿಳು ಕವಿ ಸುಬ್ರಮಣ್ಯ ಭಾರತಿಯ 6 ಅಡಿ ಎತ್ತರದ ಚಾಕೊಲೇಟ್ ಪ್ರತಿಮೆ ನಿರ್ಮಿಸಿದ ಪುದುಚೇರಿ ಬೇಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳು ಕವಿ ಸುಬ್ರಮಣ್ಯ ಭಾರತಿಯ 6 ಅಡಿ ಎತ್ತರದ ಚಾಕೊಲೇಟ್ ಪ್ರತಿಮೆ ನಿರ್ಮಿಸಿದ ಪುದುಚೇರಿ ಬೇಕರ್

ತಮಿಳು ಕವಿ ಸುಬ್ರಮಣ್ಯ ಭಾರತಿ ಅವರಿಗೆ ಗೌರವ ಸೂಚಿಸುವ ಸಲುವಾಗಿ 6 ಅಡಿ ಎತ್ತರದ ಅವರ ಚಾಕೊಲೇಟ್ ಪ್ರತಿಮೆಯನ್ನು ಪುದುಚೇರಿ ಬೇಕರ್ ರಚಿಸಿದ್ದಾರೆ.

ಮಹಾಕವಿ ಭಾರತಿಯಾರ್ ಎಂದು ಕರೆಯಲ್ಪಡುವ ಕವಿಯ 6 ಅಡಿ ಎತ್ತರದ ಚಾಕೋಲೇಟ್ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಸಿಹಿ ಡಾರ್ಕ್ ಚಾಕೊಲೇಟ್, ಬಿಳಿ ಚಾಕೊಲೇಟ್ ಮತ್ತು ಹಾಲಿನ ಚಾಕೊಲೇಟ್‌ನಿಂದ ಮಾಡಲ್ಪಟ್ಟಿರುವ ಪ್ರತಿಮೆಯು ಸುಮಾರು 482 ಕೆ.ಜಿ.ಗಳಷ್ಟು ತೂಕ ಹೊಂದಿದೆ.

ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಗೌರವಾರ್ಥವಾಗಿ ಪ್ರಮುಖ ವ್ಯಕ್ತಿಗಳ ಪ್ರತಿಮೆಯನ್ನು ತಯಾರಿಸಲಾಗುತ್ತದೆ. ಈ ವರ್ಷ ಭಾರತಿಯಾರ್ ಅವರ 139 ನೇ ಜನ್ಮ ವಾರ್ಷಿಕೋತ್ಸವ ಮತ್ತು ಅವರು ನಿಧನರಾಗಿ 100 ವರ್ಷಗಳಾಗಿರುವುದರಿಂದ, ತಮ್ಮ 40ನೇ ಚಾಕೊಲೇಟ್ ರಚನೆಯನ್ನು ಸಾಹಿತ್ಯಿಕ ದಿಗ್ಗಜರಿಗೆ ಅರ್ಪಿಸಲು ಬಯಸಿದ್ದಾಗಿ ಬೇಕರಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಾಥ್ ಬಾಲಚಂದ್ರನ್ ಹೇಳಿದ್ದಾರೆ.

ಬೇಕರಿಯು ಈ ಹಿಂದೆ ದಿವಂಗತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ನಟ ರಜನಿಕಾಂತ್, ಚಾರ್ಲಿ ಚಾಪ್ಲಿನ್, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಭಾರತೀಯ ಫೈಟರ್ ಪೈಲಟ್ ಅಭಿನಂದನ್ ವರ್ಧಮಾನ್ ಸೇರಿದಂತೆ ಉತ್ತಮ ವ್ಯಕ್ತಿಗಳ ಜೀವನ-ಗಾತ್ರದ ಚಾಕೊಲೇಟ್ ರಚನೆಗಳನ್ನು ರಚಿಸಿದೆ.

ಬೇಕರಿಯ ಹಿಂದಿನ ಎಲ್ಲಾ ಚಾಕೊಲೇಟ್ ಪ್ರತಿಮೆಗಳಿಗೆ ಹೋಲಿಸಿದರೆ, ಮಹಾಕವಿ ಸುಬ್ರಮಣ್ಯ ಭಾರತಿಯಾರ್ ಅವರ ಪ್ರತಿಮೆಯನ್ನು ಬಾಣಸಿಗ ರಾಜೇಂದ್ರನ್ ಅವರು 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ರಚಿಸಿದ್ದಾರೆ. ಈ ಚಾಕೊಲೇಟ್ ಪ್ರತಿಮೆಯನ್ನು 2021ರ ಡಿಸೆಂಬರ್ 18 ರಿಂದ 30ರ ವರೆಗೆ ಪ್ರದರ್ಶಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...