alex Certify ತಮಾಷೆಗಾಗಿ ಎಡಿಟ್ ಮಾಡಿದ್ದರೂ ಭಯಾನಕವಾಗಿದೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಾಷೆಗಾಗಿ ಎಡಿಟ್ ಮಾಡಿದ್ದರೂ ಭಯಾನಕವಾಗಿದೆ ಈ ವಿಡಿಯೋ…!

ಮಹಿಳೆಯ ಆತ್ಮವು ತನ್ನ ದೇಹವನ್ನು ತೊರೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಜನಪ್ರಿಯ ಘಂಟಾ ಎಂಬ ಮೆಮೆ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಇದು 1.4 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್‌ಗಳನ್ನು ಪಡೆದುಕೊಂಡಿದೆ. ಮಹಿಳೆಯ ದೇಹದಿಂದ ಆತ್ಮವು ಹೊರಬರುತ್ತಿರುವುದೇನೋ ನಿಜ. ಆದರೆ, ಇದು ಅಸಲಿಯಲ್ಲ…….ನಕಲಿಯಾಗಿದೆ. ಈ ವಿಡಿಯೋವನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಲಾಗಿದೆ.

ವಿಡಿಯೋವನ್ನು ಹಾಸ್ಯಕ್ಕಾಗಿ ಮಾಡಲಾಗಿದೆ. ಹಿನ್ನೆಲೆಯಲ್ಲಿ ಭಯಾನಕ ಹಿನ್ನೆಲೆ ಸಂಗೀತವನ್ನು ಪ್ಲೇ ಮಾಡಲಾಗಿದೆ. ಕೆಂಪು ಸೀರೆಯುಟ್ಟಿರುವ ಮಹಿಳೆಯೊಬ್ಬರು ಮೃತದೇಹದಂತೆ ನೆಲದ ಮೇಲೆ ಕಣ್ಣುಗಳನ್ನು ತೆರೆದು ಮಲಗಿರುವುದನ್ನು ವಿಡಿಯೋ ತೋರಿಸುತ್ತದೆ. ಇದ್ದಕ್ಕಿದ್ದಂತೆ, ದೇಹದಿಂದ ಆಕೆಯ ಆತ್ಮ ಎದ್ದು ನಿಲ್ಲುತ್ತದೆ. ನಿಖರವಾಗಿ ಮಹಿಳೆಯಂತೆಯೇ ಕಾಣುವ ಆತ್ಮವು ನಿಧಾನವಾಗಿ ಅವಳ ದೇಹದಿಂದ ಎದ್ದು ನಿಲ್ಲುತ್ತದೆ. ನಂತರ ಮಹಿಳೆಯ ಆತ್ಮವು ತನ್ನ ಮೃತದೇಹದ ಕಡೆಗೆ ಹಿಂತಿರುಗಿ ನೋಡುತ್ತದೆ. ಬಳಿಕ ಕ್ಯಾಮರಾದತ್ತ ನೋಡಿ ನಗೆ ಬೀರುತ್ತದೆ.

ಈ ವಿಡಿಯೋವನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಲಾಗಿದ್ದು, ವಿಡಿಯೋ ನೋಡಿದವರ್ಯಾರು ಭಯಭೀತರಾಗಿಲ್ಲ ಎಂದು ತೋರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...