
ತಪ್ಪು ಮಾಡಿದ ಮಕ್ಕಳಿಗೆ ಬೈಯ್ದು ಅಥವಾ ಥಳಿಸಿ ಬುದ್ಧಿ ಹೇಳುವುದನ್ನು ನಾವು ಕಂಡಿದ್ದೇವೆ. ಆದರೆ, ಯುಎಸ್ ನಲ್ಲಿನ ಪೋಷಕರು ವಿಚಿತ್ರವಾಗಿ ಶಿಕ್ಷೆ ನೀಡಿ ಬುದ್ಧಿ ಹೇಳಿದ್ದಾರೆ.
ಈ ಘಟನೆ ಯುಎಸ್ ನಲ್ಲಿ ನಡೆದಿದ್ದು, ಪ್ಲೋರಿಡಾದ ಗೆಲ್ವಿನ್ ಕ್ಲೈನ್ ಎಂಬುವವರು ಈ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ತಪ್ಪು ಮಾಡಿದ ಮಗನಿಗೆ ಪಾಲಕರು ನಾನು ಪುಂಡ ಎನ್ನುವ ಬೋರ್ಡ್ ಕೊಟ್ಟು ರಸ್ತೆಯ ಹತ್ತಿರ ನಿಲ್ಲಿಸಿದ್ದಾರೆ.
ಕಾಂಗೋದಲ್ಲಿ ಆತ್ಮಾಹುತಿ ಬಾಂಬ್ ದಾಳಿ – ಐವರು ಬಲಿ
ಈ ಬೋರ್ಡ್ ನಲ್ಲಿ ನಾನೊಬ್ಬ ಪುಂಡ. ನೀವು ಪುಂಡರನ್ನು ದ್ವೇಷಿಸುವುದಾದರೆ ಹಾರ್ನ್ ಹಾಕಿರಿ ಎಂದು ಬರೆದಿತ್ತು. ಅಲ್ಲದೇ, ಬಾಲಕನ ಹತ್ತಿರವೇ ತಂದೆ – ತಾಯಿ ಕುಳಿತಿದ್ದಾರೆ. ಆದರೆ, ಬಾಲಕ ಯಾವ ತಪ್ಪು ಮಾಡಿದ್ದಾನೆ ಎಂಬ ಕುರಿತು ಮಾಹಿತಿ ತಿಳಿದು ಬಂದಿಲ್ಲ.
ಪಾಲಕರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸಾರ್ವಜನಿಕರಿಂದ ಬಾಲಕ ಬುದ್ಧಿ ಕಲಿಯಲು ಆಗುವುದಿಲ್ಲ. ಶಿಸ್ತಿನ ವೇಷದಲ್ಲಿ ಈ ರೀತಿಯ ಶಿಕ್ಷೆ ನೀಡುವುದು ತಪ್ಪು ಎಂದು ಹಲವರು ಕಮೆಂಟ್ ಮಾಡಿದ್ದರೆ, ಹಲವರು ಆತನ ಮನಸ್ಸು ಘಾಸಿಗೊಳಿಸಲಾಗಿದೆ. ಆತನ ತಪ್ಪಿಗೆ ಮನೆಯಲ್ಲಿಯೇ ಬುದ್ಧಿ ಹೇಳಿ ತಿದ್ದಬೇಕಿತ್ತು. ಹೀಗೆ ಬೀದಿಗೆ ತರಬಾರದಿತ್ತು ಎಂದು ಕಮೆಂಟ್ ಮಾಡಿದ್ದಾರೆ.
https://www.youtube.com/watch?v=h2kC1IUzWfs&t=2s