
ಲೀಲಾ ಹಾರ್ಮೋಜಿ ಅವರು ತಮ್ಮ ದಿನಚರಿಯ ಕುರಿತು ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ನಾನು ವ್ಯವಸ್ಥಾಪಕ ಪಾಲುದಾರಳು. ವ್ಯಾಪಾರ ಹೂಡಿಕೆ ಕಂಪನಿಯಾದ ಅಕ್ವಿಸಿಷನ್‌ನ ಸಿಇಒ ಎಂದಿರುವ ಇವರು, ತಮ್ಮ ಕೆಲಸದ ಕುರಿತು ಮಾಹಿತಿ ನಿಡಿದ್ದಾರೆ.
ಕಠಿಣ ಪರಿಶ್ರಮದಿಂದ ತಾನು ಇಷ್ಟು ಮೇಲೆ ಬಂದೆ ಎಂದು ಹೇಳಿಕೊಂಡಿರುವ ಈಕೆ, $ 200 ಮಿಲಿಯನ್ ವ್ಯವಹಾರದ ಪೋರ್ಟ್‌ಫೋಲಿಯೊ ಹೊಂದುವುದು ಸುಲಭವಲ್ಲ, ಅದು ನನ್ನ ಸತತ ಶ್ರಮದ ಫಲ ಎಂದಿದ್ದಾರೆ.
“ನನಗೆ 30 ವರ್ಷ. ಮತ್ತು ನಾನು $200M ಪೋರ್ಟ್‌ಫೋಲಿಯೊ ವ್ಯವಹಾರಗಳನ್ನು ನಡೆಸುತ್ತಿದ್ದೇನೆ,” ಎಂದು ಹೇಳಿಕೊಂಡಿರುವ ಲೀಲಾ, ನಾನು ದಿನವೂ 4 ಅಥವಾ 5 ಗಂಟೆಗೆ ಏಳುತ್ತೇನೆ. ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸುವ ಬದಲು, ಕಾಫಿಯನ್ನು ಆನಂದಿಸಿ ವರ್ಕ್‌ಔಟ್ ಮಾಡುತ್ತೇನೆ. ಜಿಮ್ ಅವಧಿಯಲ್ಲಿ, ಪಾಡ್ ಕಾಸ್ಟ್‌ಗಳು, ಆಡಿಯೊಬುಕ್‌ಗಳು ಅಥವಾ ಕೆಲವು ಸಂಗೀತವನ್ನು ಕೇಳಲು ಇಷ್ಟಪಡುತ್ತೇನೆ. ಕೆಲವೊಮ್ಮೆ ಸ್ನಾನ ಮಾಡದೆಯೂ ಕೆಲಸಕ್ಕೆ ಹೋಗುತ್ತೇನೆ. ನನ್ನ ಅಡುಗೆಯ ಸಮಯ ಉಳಿಸಲು ಹೊರಗಡೆ ತಿನ್ನುತ್ತೇನೆ ಎಂದಿದ್ದಾರೆ.
ಇದರಲ್ಲಿ ಹೊಸತು ಏನಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದು, ತಮ್ಮನ್ನು ತಾವು ಈಕೆ ಹೊಗಳಿಕೊಂಡಿರುವ ರೀತಿಗೆ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ.