ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ವಿಚಿತ್ರ ಆದೇಶಗಳಿಗೆ ಹೆಸರುವಾಸಿ. ಈ ಹಿಂದೆ ದೇಶವಾಸಿಗಳು ತನ್ನಂತೆಯೇ ಕಟಿಂಗ್ ಮಾಡಿಸಿಕೊಳ್ಳಬೇಕೆಂದು ಸೂಚನೆ ಹೊರಡಿಸಿದ್ದ ಕಿಮ್ ಜಾಂಗ್ ಉನ್ ಈಗ ಮತ್ತೊಂದು ಆದೇಶದ ಮೂಲಕ ಸುದ್ದಿಯಾಗಿದ್ದಾರೆ.
ಉತ್ತರ ಕೊರಿಯಾದ ಸಾರ್ವಜನಿಕರು ತನ್ನ ಮಗಳು ಕಿಮ್ ಜು ಎ (Kim ju Ae) ಹೆಸರನ್ನು ಇರಿಸಿಕೊಳ್ಳುವಂತಿಲ್ಲ ಎಂದು ಆದೇಶಿಸಲಾಗಿದ್ದು, ಹಾಗೊಮ್ಮೆ ಯಾರಾದರೂ ಈಗಾಗಲೇ ಇರಿಸಿಕೊಂಡಿದ್ದರೆ ಒಂದು ವಾರದೊಳಗೆ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹಾಜರಾಗಿ ಹೆಸರು ಬದಲಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಕಿಮ್ ಜಾಂಗ್ ಉನ್ ಪುತ್ರಿಗೆ ಈಗ 9 ವರ್ಷವಾಗಿದ್ದು, ಇತ್ತೀಚೆಗಷ್ಟೇ ಆಕೆ ತನ್ನ ತಂದೆಯೊಂದಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಳು. ಕಿಮ್ ಜಾಂಗ್ ಉನ್ ಗೆ ಒಟ್ಟು ಮೂವರು ಮಕ್ಕಳು ಇದ್ದು, ಪುತ್ರಿ ಕಿಂಗ್ ಜು ಎ ತನ್ನ ತಂದೆಯ ಉತ್ತರಾಧಿಕಾರಿಯಾಗಲಿದ್ದಾಳೆ ಎಂದು ಹೇಳಲಾಗುತ್ತಿದೆ.