alex Certify ತನ್ನ ನಿತಂಬಕ್ಕೆ ಬರೋಬ್ಬರಿ 13 ಕೋಟಿ ರೂ. ವಿಮೆ ಮಾಡಿಸಿದ ಮಾಡೆಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ನಿತಂಬಕ್ಕೆ ಬರೋಬ್ಬರಿ 13 ಕೋಟಿ ರೂ. ವಿಮೆ ಮಾಡಿಸಿದ ಮಾಡೆಲ್…!

ನಿಮ್ಮ ಜೀವಕ್ಕೆ, ಮನೆಗೆ, ಕಾರಿಗೆ ವಿಮೆ ಮಾಡಿಸಿರುತ್ತೀರಿ. ಯಾಕೆಂದರೆ ಅದು ಹಾಳಾದರೆ, ರಿಪೇರಿ ವೆಚ್ಚಕ್ಕೆ ಬೇಕಾಗುತ್ತದೆ ಎಂಬ ಮುಂಜಾಗ್ರತೆ. ಆದರೆ ಪೃಷ್ಠಕ್ಕೆ ಅಥವಾ ನಿತಂಬಕ್ಕೆ ವಿಮೆ ಮಾಡಿಸಿದ್ದೀರಾ..?!

ಅಚ್ಚರಿ, ಅಸಹ್ಯ ಪಡಬೇಡಿರಿ. ಬ್ರೆಜಿಲ್‌ನ 35 ವರ್ಷದ ಮಾಡೆಲ್‌ ನ್ಯಾಥಿ ಕಿಹಾರಾ ಅವರು ತಮ್ಮ ಹಿಂಬದಿಗೆ ಬರೋಬ್ಬರಿ 13 ಕೋಟಿ ರೂ. ಮೊತ್ತದ ವಿಮೆ ಮಾಡಿಸಿದ್ದಾರೆ. ಅವರ ಪೃಷ್ಠವು 126 ಸೆಂ.ಮೀ. ಅಗಲವಿದೆಯಂತೆ. ಇದನ್ನು ಜೋಪಾನವಾಗಿ ಕಾಪಾಡಿಕೊಂಡಿರುವ ನ್ಯಾಥಿಗೆ 2021ನೇ ಸಾಲಿನ ಸುಂದರ ನಿತಂಬ ಸುಂದರಿ ’ ಮಿಸ್‌ ಬುಮ್‌ಬುಮ್‌’ ಪ್ರಶಸ್ತಿ ಕೂಡ ನೀಡಲಾಗಿದೆ.

ಸಚಿವ ಸುಧಾಕರ್ ಗೆ ಪ್ರಿಯಾಂಕ್ ಖರ್ಗೆ ಟಾಂಗ್: HM ಅಂದ್ರೆ ಹೋಮ್ ಮಿನಿಸ್ಟರ್ ಅನ್ನಬೇಕಾ? ಹೆಲ್ತ್ ಮಿನಿಸ್ಟರ್ ಅನ್ನಬೇಕಾ? ಎಂದು ಪ್ರಶ್ನೆ

ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಾಲ್ಕು ತಿಂಗಳಲ್ಲೇ ನ್ಯಾಥಿಗೆ ನಿತಂಬ ಸುಂದರಿ ಕಿರೀಟ ಸಿಕ್ಕಿರುವುದು ವಿಶೇಷ. ಅಂದಹಾಗೆ, ಆಕೆಗೆ 9 ವರ್ಷದ ದೊಡ್ಡ ಮಗ ಕೂಡ ಇದ್ದಾನೆ.

ಬ್ರೆಜಿಲ್‌ನಲ್ಲೇ ಅತ್ಯಂತ ದೊಡ್ಡ, ವಿಶಾಲವಾದ ನಿತಂಬ ಇರುವುದು ನನ್ನ ಬಳಿ ಮಾತ್ರ. ಈ ಬಗ್ಗೆ ಹೆಮ್ಮೆ ಇದೆ. ಅನೇಕ ಮಹಿಳೆಯರು ತಮ್ಮ ದೇಹದ ಸೌಂದರ್ಯದ ಬಗ್ಗೆ ತಾವಾಗಿಯೇ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ. ಅವರು ತಮ್ಮ ದೇಹವನ್ನು ದ್ವೇಷಿಸುತ್ತಿರುತ್ತಾರೆ. ಎದೆ ದಪ್ಪಗಿದೆ, ತೊಡೆ ಸಣ್ಣಗಿದೆ ಎಂದು ಕೊರಗುತ್ತಲೇ ಇರುತ್ತಾರೆ. ಇವರಿಗೆಲ್ಲ ನನ್ನ ನಿತಂಬ ಸೌಂದರ್ಯ ಪ್ರೀತಿಯಿಂದ ಸಂದೇಶ ಕೊಡಲು ಇಷ್ಟಪಡುತ್ತೇನೆ. ನಮ್ಮ ದೇಹ ಹೇಗಿದೆಯೋ ಹಾಗೆಯೇ ಪ್ರೀತಿಸಬೇಕಿರುವುದು ಬಹಳ ಮುಖ್ಯ. ಇದರಿಂದ ಆತ್ಮವಿಶ್ವಾದ ಹೆಚ್ಚುತ್ತದೆ. ನಮ್ಮ ಘನತೆಯನ್ನು ನಾವಾಗಿಯೇ ಕೆಳಕ್ಕೆ ಇಳಿಸಬಾರದು ಎಂದು ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮನದಾಳ ಹಂಚಿಕೊಂಡಿದ್ದಾರೆ. ನ್ಯಾಥಿಯ ಮುಂದಿನ ಗುರಿ ತನ್ನ ನಿತಂಬವನ್ನು ಹೆಚ್ಚುವರಿ 4 ಸೆ.ಮೀ. ವಿಶಾಲ ಆಗಿಸುವುದಂತೆ…!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...