ಪಲಾವ್ ಅಥವಾ ಬಿರಿಯಾನಿ ಬಿಸಿಬಿಸಿಯಾಗಿರುವಂತೆ ಸೇವಿಸಲು ಬಲು ರುಚಿ. ಬೆಳಗ್ಗೆ ಮಾಡಿದ ಈ ತಿನಿಸು ಮಧ್ಯಾಹ್ನದ ವೇಳೆ ತಣ್ಣಗಾಗುತ್ತದೆ. ಇದನ್ನು ತಿನ್ನಲೂ ಆಗದೆ ಎಸೆಯಲೂ ಆಗದೆ ಚಡಪಡಿಸುತ್ತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ.
ಒಮ್ಮೆ ಮಾಡಿದ ಪಲಾವ್ ಅಥವಾ ಯಾವುದೇ ರೈಸ್ ಐಟಮ್ ಅನ್ನು ಮತ್ತೆ ಗ್ಯಾಸ್ ಮೇಲಿಟ್ಟು ಬಿಸಿ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ತಳ ಹಿಡಿಯುವುದು ಖಚಿತ. ಹಾಳಾಗದಂತೆ ತಡೆಯಲು ಒಂದು ದಿನ ಫ್ರಿಜ್ ನಲ್ಲಿಟ್ಟು ಬಳಿಕ ಮರುದಿನ ತಿನ್ನೋಣವೆಂದರೆ ಅದು ರುಚಿ ಬದಲಾಗಿರುತ್ತದೆ ಜೊತೆಗೆ ತಳ ಹಿಡಿಯುತ್ತದೆ.
ಅದನ್ನು ತಪ್ಪಿಸಲು ಮೈಕ್ರೋವೇವ್ ನಲ್ಲಿಟ್ಟು ಬಿಸಿ ಮಾಡುವುದಾದರೆ ಒಂದು ಕಪ್ ಅಕ್ಕಿಗೆ ಒಂದು ಚಮಚ ನೀರು ಸೇರಿಸಿ. ಮೈಕ್ರೋವೇವ್ ನಲ್ಲಿ ಇಡುವ ಮೊದಲು ಪ್ಲೇಟ್ ಅಥವಾ ಟವಲ್ ನಿಂದ ಮುಚ್ಚಿ. ಇದರಿಂದ ಪಲಾವ್ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.
ನೇರವಾಗಿ ಗ್ಯಾಸ್ ಸ್ಟೌ ನಲ್ಲಿಟ್ಟು ಬಿಸಿ ಮಾಡುವವರಾದರೆ ನೀರು ಎಣ್ಣೆ ಅಥವಾ ತುಸು ಬೆಣ್ಣೆ ಸೇರಿಸಿ ಬಿಸಿ ಮಾಡಿ. ಇದರಿಂದ ಒಣಗಿದ ಅಥವಾ ಡ್ರೈ ಆದ ಅನ್ನ ಸುಲಭವಾಗಿ ಬಿಡಿಸಿಕೊಳ್ಳುತ್ತದೆ.