
ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರಿ ಈರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಇದ್ದು ತಮ್ಮ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರ್ತಾರೆ. ಅದೇ ರೀತಿ ಈ ಬಾರಿ ಕೂಡ ತಮ್ಮ ಕೆಲವೊಂದಿಷ್ಟು ಅನ್ಸೀನ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಈರಾ ಖಾನ್ ತಮ್ಮ ತಂದೆ ಅಮೀರ್ ಖಾನ್ ಹಾಗೂ ಬಾಯ್ಫ್ರೆಂಡ್ ನೂಪುರ್ ಶಿಖಾರೆ ಜೊತೆ ಇರುವ ಫೋಟೋ ಶೇರ್ ಮಾಡಿದ್ದು ಈ ಫೋಟೋದಲ್ಲಿ ಅಮೀರ್ ಖಾನ್ ಹಾಗೂ ನೂಪುರ್ ಒಂದೇ ರೀತಿಯ ನೈಟ್ ಡ್ರೆಸ್ ಧರಿಸಿರುವುದನ್ನು ನೀವು ಕಾಣಬಹುದಾಗಿದೆ. ಅದೇ ರೀತಿ ಈರಾ ಹಾಗೂ ಅವರ ಸ್ನೇಹಿತೆ ಒಂದೇ ರೀತಿಯ ನೈಟ್ಡ್ರೆಸ್ ಧರಿಸಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಈರಾ, ಸ್ವೆಟರ್ ಹವಾಮಾನ ಮತ್ತೆ ವಾಪಸ್ ಬರಲಿ ಹಾಗೂ ಕ್ರಿಸ್ಮಸ್ಗೆ ಎಂದಿಗೂ ಸ್ವಾಗತ ಎಂದು ಶೀರ್ಷಿಕೆ ನೀಡಿದ್ದಾರೆ.
ಅಮೀರ್ ಖಾನ್ ತಮ್ಮ ಮೊದಲ ಪತ್ನಿ ರೀನಾ ದತ್ತಾರ ಮೂಲಕ ಈರಾ ಖಾನ್ರನ್ನು ತಮ್ಮ ಮಗಳಾಗಿ ಪಡೆದಿದ್ದಾರೆ. ತಮ್ಮ ಮೊದಲ ವಿವಾಹದಲ್ಲಿ ಅಮೀರ್ ಖಾನ್ ಜುಲೈದ್ ಎಂಬ ಹೆಸರಿನ ಪುತ್ರ ಕೂಡ ಇದ್ದಾರೆ.
