
ತಂದೆಯೊಬ್ಬರು ಹೊಸ ಬೈಸಿಕಲ್ ತಂದಾಗ ಅದನ್ನು ನೋಡಿದಂತಹ ಅವರ ಮಗ, ಪುಟ್ಟ ಬಾಲಕ ಸಂತೋಷದಿಂದ ಕುಣಿಯುತ್ತಿರುವ ವಿಡಿಯೋವನ್ನು ಅಧಿಕಾರಿ ಹಂಚಿಕೊಂಡಿದ್ದಾರೆ. ಅವರು ಖರೀದಿಸಿದ್ದು ಸೆಕೆಂಡ್ ಹ್ಯಾಂಡ್ ಬೈಸಿಕಲ್ ಆಗಿದ್ದರೂ ಕೂಡ, ಮರ್ಸಿಡೆಸ್ ಬೆನ್ಜ್ ಖರೀದಿಸುವವರಿಗಿಂತಲೂ ಜಾಸ್ತಿಯೇ ತಂದೆ-ಮಗ ಹರ್ಷ ವ್ಯಕ್ತಪಡಿಸಿದ್ದಾರೆ.
ಬಾಲಕ ಸಂತೋಷದಿಂದ ಜಿಗಿಯುತ್ತಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ತನ್ನ ಹೊಸ ಸೆಕೆಂಡ್ ಹ್ಯಾಂಡ್ ಸೈಕಲ್ಗೆ ಹಾರ ಹಾಕಿ ಪೂಜೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಅವರ ಪುತ್ರನ ಸಂತೋಷಕ್ಕೆ ಪಾರಲೇ ಇರಲಿಲ್ಲ. ಬಹಳ ಸಂಭ್ರಮದಿಂದ ಬಾಲಕ ಮೇಲಕ್ಕೆ, ಕೆಳಕ್ಕೆ ಜಿಗಿದಿದ್ದಾನೆ. ಬಾಲಕ ತನ್ನ ತಂದೆಯೊಂದಿಗೆ ಸೈಕಲ್ಗೆ ಪೂಜೆ ಸಲ್ಲಿಸಿದ ಕ್ಷಣ ಹೃದಯಸ್ಪರ್ಶಿಯಾಗಿದೆ. ಈ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ತಂದೆ-ಮಗನ ಸಂತೋಷವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.