alex Certify ತಂದೆ ಮೇಲೆ ಹಲ್ಲೆ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ಬಾಲಕ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಮೇಲೆ ಹಲ್ಲೆ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ಬಾಲಕ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವ ದೃಶ್ಯ

ಆಘಾತಕಾರಿ ದೃಶ್ಯವೊಂದರ ಸಿಸಿ ಟಿವಿ ಫುಟೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತನ್ನ ತಂದೆ ಮೇಲೆ ಏಳು ತಿಂಗಳ ಹಿಂದೆ ಹಲ್ಲೆ ಮಾಡಿದವನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಅಪ್ರಾಪ್ತ ಬಾಲಕನೊಬ್ಬ ತನ್ನ ಸ್ನೇಹಿತರ ಜೊತೆ ಸೇರಿ ಹಾಡಹಗಲೇ ಗುಂಡು ಹಾರಿಸಿದ್ದಾನೆ. ಇಂತಹದೊಂದು ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

36 ವರ್ಷದ ಜಾವೇದ್ ಎಂಬಾತ ಗುಂಡೇಟಿನಿಂದ ಗಾಯಗೊಂಡಿದ್ದು, ಈತ ಶುಕ್ರವಾರ ಸಂಜೆ 4:45 ರ ಸುಮಾರಿಗೆ ಜಹಾಂಗೀರ್ಪುರಿ ಬಳಿಯ ಪಾರ್ಕ್ ಒಂದರಲ್ಲಿ ಕುಳಿತುಕೊಂಡಿದ್ದ. ಮೂವರು ಬಾಲಕರು ಆತನ ಸಮೀಪಕ್ಕೆ ಬಂದಿದ್ದು, ಈ ಪೈಕಿ ಒಬ್ಬಾತ ತನ್ನ ಬಳಿ ಇದ್ದ ಗನ್ ನಿಂದ ನೇರವಾಗಿ ಗುರಿ ಇಟ್ಟು ಫೈರ್ ಮಾಡಿದ್ದಾನೆ. ಬಳಿಕ ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ದೃಶ್ಯಾವಳಿ ಸಮೀಪದಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ತಮಗೆ ಬಂದ ಕರೆ ಅನ್ವಯ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಡೇಟಿನಿಂದ ಗಾಯಗೊಂಡಿದ್ದ ಜಾವೇದ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಜಾವೇದ್ ಏಳು ತಿಂಗಳ ಹಿಂದೆ ಮೂವರು ಬಾಲಕರ ಪೈಕಿ ಒಬ್ಬನ ತಂದೆ ಮೇಲೆ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ. ಹೀಗಾಗಿ ಇದರ ಸೇಡು ತೀರಿಸಿಕೊಳ್ಳಲು ಗುಂಡು ಹಾರಿಸಲಾಗಿದೆ. ಆದರೆ ಅಪ್ರಾಪ್ತರ ಕೈಗೆ ಗನ್ ಸಿಕ್ಕಿದ್ದಾದರೂ ಹೇಗೆ ಎಂಬ ಪ್ರಶ್ನೆ ಈಗ ಪೊಲೀಸರನ್ನು ಕಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...