alex Certify ತಂದೆ ಮರಣಾನಂತರ ಬಂದ 36 ಲಕ್ಷ ರೂಪಾಯಿಗಳನ್ನು ಜೂಜಿನಲ್ಲಿ ಉಡಾಯಿಸಿದ ಅಪ್ರಾಪ್ತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಮರಣಾನಂತರ ಬಂದ 36 ಲಕ್ಷ ರೂಪಾಯಿಗಳನ್ನು ಜೂಜಿನಲ್ಲಿ ಉಡಾಯಿಸಿದ ಅಪ್ರಾಪ್ತ…!

ಅಪ್ರಾಪ್ತನೊಬ್ಬ ತನ್ನ ತಂದೆಯ ಮರಣಾನಂತರ ಬಂದ ಹಣವಾದ 36 ಲಕ್ಷ ರೂಪಾಯಿಗಳನ್ನು ಆನ್ಲೈನ್ ಗೇಮಿಂಗ್ ನಲ್ಲಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಹೈದರಾಬಾದಿನ ಅಂಬರ ಪೇಟೆಯಲ್ಲಿ ಈ ಬಾಲಕನ ಕುಟುಂಬ ವಾಸವಿದ್ದು, ಈತನ ತಂದೆ ಸಾವಿನ ಬಳಿಕ ತಾಯಿ ಖಾತೆಗೆ 36 ಲಕ್ಷ ಹಣ ಬಂದಿತ್ತು. ಇದನ್ನು ಅವರು ಎರಡು ಬ್ಯಾಂಕ್ ಖಾತೆಗಳಲ್ಲಿ ಇಟ್ಟಿದ್ದರು.

BIG NEWS: KSRTC ಬಸ್ ಹಾಗೂ ಕಾಲೇಜು ಬಸ್ ನಡುವೆ ಅಪಘಾತ; ವಿದ್ಯಾರ್ಥಿಗಳು ಸೇರಿ 20 ಜನರಿಗೆ ಗಾಯ

ತನ್ನ ತಾತನ ಮೊಬೈಲ್ನಲ್ಲಿ ಆನ್ಲೈನ್ ಗೇಮ್ ಆಟವಾಡುತ್ತಿದ್ದ ಬಾಲಕನಿಗೆ ಈ ವಿಷಯ ತಿಳಿದಿದ್ದು, ಮೊದಲಿಗೆ ಹತ್ತು ಸಾವಿರ ರೂಪಾಯಿ ಹಣ ಕಟ್ಟಿ ಕಳೆದುಕೊಂಡಿದ್ದಾನೆ.

ನಂತರ ಅದನ್ನು ವಾಪಸ್ ಪಡೆದುಕೊಳ್ಳಲು ನಿರಂತರವಾಗಿ ಆಟವಾಡಿದ್ದು 36 ಲಕ್ಷ ರೂಪಾಯಿ ಖಾಲಿ ಮಾಡಿದ್ದಾನೆ. ಖಾತೆಯಲ್ಲಿ ಹಣವಿಲ್ಲದ್ದನ್ನು ಕಂಡು ಕಂಗಾಲಾದ ಬಾಲಕನ ತಾಯಿ ಸೈಬರ್ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...