ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಚರ್ಮದ ಆರೈಕೆಗೆ ಬಳಸುತ್ತಾರೆ. ಆದರೆ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಮುಲ್ತಾನಿ ಮಿಟ್ಟಿಯನ್ನು ಕೂದಲಿಗೆ ಬಳಸುವುದರಿಂದ ನೆತ್ತಿಯ ಕೊಳೆಯನ್ನು ತೆಗೆದು ಹಾಕುತ್ತದೆ. ನೆತ್ತಿಗೆ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿ. ಈ ಮುಲ್ತಾನಿ ಮಿಟ್ಟಿ ಬಳಸಿ ಒಣ ಕೂದಲಿನ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ.
4 ಚಮಚ ಮುಲ್ತಾನಿ ಮಿಟ್ಟಿಗೆ ½ ಕಪ್ ಮೊಸರು, ಅರ್ಧ ನಿಂಬೆ ರಸ, 2 ಚಮಚ ಜೇನುತುಪ್ಪ ಇವಿಷ್ಟನ್ನು ಒಂದು ಕಪ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟ್ ನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಕವರ್ ಮಾಡಿ. ಬಳಿಕ 20 ನಿಮಿಷ ಬಿಟ್ಟು ತ ವಾಶ್ ಮಾಡಿ. ಕಂಡಿಷನರ್ ನ್ನು ಬಳಸಿ. ಇದನ್ನು ವಾರಕ್ಕೆ 1-2 ಬಾರಿ ಬಳಸಿ.
ಮೊಸರು ನಿಮ್ಮ ಕೂದಲಿಗೆ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪ ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ನಿಂಬೆ ರಸದಲ್ಲಿರುವ ವಿಟಮಿನ್ ಸಿ ಆರೋಗ್ಯಕರ ಕೂದಲಿನ ಬೆಳವಣೆಗೆಯನ್ನು ಉತ್ತೇಜಿಸುತ್ತದೆ.