ಯಾವುದಾದರೂ ಹುಡುಗಿಯ ಜತೆ ಡೇಟಿಂಗ್ ಮಾಡುವ ಸಮಯದಲ್ಲಿ ಮನೆಯವರಿಗೆ ತಿಳಿಯದಂತೆ ಕದ್ದುಮುಚ್ಚಿ ಯುವಕರು ಹೋಗುವುದು ಮಾಮೂಲು. ಇದೇ ಕಾರಣಕ್ಕೆ ಯಾರಾದರೂ ನೋಡಿಬಿಟ್ಟರೆ ಎನ್ನುವ ಭಯವಿರುತ್ತದೆ.
ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಯುವಕನೊಬ್ಬ ಆನ್ಲೈನ್ನಲ್ಲಿ ಪರಿಚಯವಾಗಿರುವ ಸ್ನೇಹಿತೆಯ ಜತೆ ಡೇಟಿಂಗ್ ಮಾಡಲು ತಾಯಿಯನ್ನು ಕರೆದುಕೊಂಡು ಹೋಗಿದ್ದಾನೆ !
ಈ ಡೇಟಿಂಗ್ನ ಸಂಪೂರ್ಣ ವಿಡಿಯೋ ಚಿತ್ರೀಕರಿಸಿರುವ ಯುವಕ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅದನ್ನು ಶೇರ್ ಮಾಡಿಕೊಂಡಿದ್ದಾನೆ.
ಸಿದ್ದೇಶ್ ಲೋಖರೆ ಎಂಬ ಯುವಕ ಆನ್ಲೈನ್ನಲ್ಲಿ ಪರಿಚಯವಾಗಿರುವ ಯುವತಿಯ ಜತೆ ಡೇಟಿಂಗ್ ಮಾಡಲು ಬಯಸಿದ್ದ. ಆ ನಂತರ ಇದನ್ನು ತನ್ನ ತಾಯಿಗೆ ಗೊತ್ತಾದರೆ ಬೇಸರವಾಗಬಹುದು ಎನ್ನುವ ಉದ್ದೇಶದಿಂದ ತಾಯಿಯನ್ನು ಕರೆದುಕೊಂಡು ಹೋಗಿದ್ದಾನೆ. ತಾಯಿಗೆ ತಾವು ಹೋಗುತ್ತಿರುವುದು ಎಲ್ಲಿಗೆ, ಏಕೆ ಎಂದು ತಿಳಿದಿರಲಿಲ್ಲ. ನಂತರ ಆ ಹುಡುಗಿಯನ್ನು ಭೇಟಿ ಮಾಡಿಸಿದ್ದಾನೆ ಯುವಕ.
ತಾಯಿಯನ್ನು ಭೇಟಿಯಾದಾಗ ಯುವತಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾಳೆ. ನಂತರ ಇಬ್ಬರೂ ಸ್ನೇಹಿತರಾಗಿದ್ದಾರೆ. ಹೋಟೆಲ್ಗೂ ಹೋಗಿದ್ದಾರೆ. ಇಬ್ಬರೂ ತುಂಬಾ ಕ್ಲೋಸ್ ಆದ ಮೇಲೆ ಯುವಕ ಆ ಯುವತಿಯನ್ನು ತಾಯಿಗೆ ಪರಿಚಯ ಮಾಡಿಸಿದ್ದಾನೆ. ತಾಯಿಯೂ ಈಗ ಖುಷಿಯಾಗಿದ್ದು, ಮಗನಿಗೆ ಬೆಂಬಲಿಸಿದ್ದಾಳೆ! ಈ ವಿಡಿಯೋ ಅನ್ನು ಸಹಸ್ರಾರು ಮಂದಿ ಮೆಚ್ಚಿ ಕಮೆಂಟ್ ಮಾಡಿದ್ದಾರೆ.