ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ಎಂಬ ರೂಪಾಂತರ ವೈರಸ್ ಮಾರಣಾಂತಿಕವಾಗಿ ಜನರನ್ನು ಕಾಡುತ್ತಿದೆ. ಈ ರೂಪಾಂತರಿ ತಳಿಗಳು ಮಾನವನ ದೇಹದಲ್ಲಿ ಅತಿ ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ.
ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ವೈರಸ್ ನರ ಹಾಗೂ ನರವೈಜ್ಞಾನಿಕ ಸಂಬಂಧಿತ ಕಾಯಿಲೆಯನ್ನು ಉಂಟು ಮಾಡಬಲ್ಲದು. ಕೋಶದಿಂದ ಕೋಶಕ್ಕೆ ವರ್ಗಾವಣೆಯಾಗುತ್ತದೆ. ಒಮ್ಮೆ ಮೆದುಳಿಗೆ ವ್ಯಾಪಿಸಿತೆಂದರೆ ಇನ್ನಿಲ್ಲದ ನರ ಮಂಡಲಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೇಹದ ಯಾವ ಅಂಗಕ್ಕೆ ವೈರಸ್ ತಗುಲುತ್ತದೆಯೋ ಆ ಅಂಗದ ಮೇಲೆ ಅಪಾಯ ಹೆಚ್ಚು ಎಂದು ಐ ಸಿ ಎಂ ಆರ್ ವೈದ್ಯ ರಾಮನ್ ಗಂಗಖೇಡ್ಕರ್ ತಿಳಿಸಿದ್ದಾರೆ.
ಮಹಿಳಾ ಉದ್ಯೋಗಿ ಮೈಕೈ ಮುಟ್ಟಿ ಕಿರುಕುಳ, ಹಾಸಿಗೆ ಹಂಚಿಕೊಳ್ಳಲು ಒತ್ತಡ ಹಾಕಿದ ಅಧಿಕಾರಿ ಅರೆಸ್ಟ್
ಕೊರೊನಾ ರೂಪಾಂತರಿ ತಳಿಯಾದ ಡೆಲ್ಟಾ ವೈರಸ್ ಮೊದಲು ಪತ್ತೆಯಾಗಿರುವುದು ಭಾರತದಲ್ಲಿಯಾದರೂ ಇದೀಗ ಸುಮಾರು 85 ರಾಷ್ಟ್ರಗಳಿಗೆ ವ್ಯಾಪಿಸಿದೆ.