
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್ ರೂಪಾಂತರವು ಭಾರತದಲ್ಲಿ ಡೆಲ್ಟಾ ವೇರಿಯಂಟ್ ಅನ್ನೆ ರಿಪ್ಲೇಸ್ ಮಾಡ್ತಿದೆ ಎಂದು ಅಧಿಕೃತ ಮೂಲಗಳಿಂದ ವರದಿಯಾಗಿದೆ.
ಒಂದೇ ದಿನದಲ್ಲಿ 309 ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಇಲ್ಲಿವರೆಗೆ ವರದಿಯಾದ ಅತ್ಯಧಿಕ ಏಕದಿನ ಪ್ರಕರಣಗಳ ಸಂಖ್ಯೆ. ಈ ಮೂಲಕ ದೇಶದಲ್ಲಿ 1270 ಒಮಿಕ್ರಾನ್ ಸೋಂಕಿತರಿದ್ದಾರೆ. ಅದರಲ್ಲಿ ಈಗಾಗಲೇ 374 ಜನ ಚೇತರಿಸಿಕೊಂಡಿದ್ದಾರೆ.
ಅಕ್ರಮ –ಸಕ್ರಮ: ರೈತರಿಗೆ ಸಿಎಂ ಸಿಹಿ ಸುದ್ದಿ
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿ ಭಾರತದ 23 ಪ್ರದೇಶಗಳಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 450, ದೆಹಲಿ 320, ಕೇರಳ 109ಮತ್ತು ಗುಜರಾತ್ 97 ಪ್ರಕರಣಗಳು ವರದಿಯಾಗಿವೆ.