ಲಕ್ನೋ: ಉತ್ತರ ಪ್ರದೇಶದಲ್ಲಿ ಕೊರೋನಾದ ಎರಡು ಕಪ್ಪಾ ರೂಪಾಂತರಿ ಪ್ರಕರಣ ಪತ್ತೆಯಾಗಿದೆ. ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿಗೆ ಒಟ್ಟು 109 ಮಾದರಿಗಳನ್ನು ನೀಡಲಾಗಿತ್ತು. ಅದರಲ್ಲಿ ಎರಡು ಕಪ್ಪಾ ತಳಿ ಪತ್ತೆಯಾಗಿದ್ದು, 107 ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆಯಾಗಿದೆ ಎಂದು ರಾಜ್ಯ ಸರಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ರ ಹೊಸ ತಳಿ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಾಹಿತಿ ನೀಡಲಾಗಿದೆ. ಕೋವಿಡ್ ನ ಎರಡು ರೂಪಾಂತರಗಳು ಹೊಸತಲ್ಲ. ಜೀನೋಮ್ ಅನುಕ್ರಮಣಿಕೆಯ ಸೌಲಭ್ಯವನ್ನು ಹೆಚ್ಚಿಸಲಾಗುತ್ತಿದೆ. ಇದು ಪ್ರಯೋಗಾಲಯದ ಪ್ರಕ್ರಿಯೆಯಾಗಿದ್ದು, ರೂಪಾಂತರಗಳನ್ನು ನಿರೂಪಿಸಲು ಮತ್ತು ರೋಗ ಪತ್ತೆಹಚ್ಚುವ ವಿಧಾನವಾಗಿದೆ ಎಂದು ತಿಳಿಸಲಾಗಿದೆ.
ಸಂಸದೆ ಪ್ರಗ್ಯಾ ಠಾಕೂರ್ ಮತ್ತೊಂದು ವಿಡಿಯೋ ವೈರಲ್
ರಾಜ್ಯದಲ್ಲಿ ಶೇ.0.04ರಷ್ಟು ಕೊರೊನಾ ಪ್ರಕರಣಗಳಿವೆ. ಡೆಲ್ಟಾ, ಆಲ್ಫಾ, ಡೆಲ್ಟಾ ಪ್ಲಸ್ ಜತೆಗೆ ಕಪ್ಪಾ ತಳಿ ಕೂಡ ಹೆಚ್ಚು ಹರಡುವಿಕೆ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಹೊಸ ರೂಪಾಂತರಿ ತಳಿ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಕಪ್ಪಾ ರೂಪಾಂತರಿ ತಳಿಗೂ ಚಿಕಿತ್ಸೆ ಸಾಧ್ಯವಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ತಿಳಿಸಿದ್ದಾರೆ.