ಕಳೆದ ಕೆಲವು ವರ್ಷಗಳಲ್ಲಿ ನೀವು ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ವಿನ್ಯಾಸದಲ್ಲಿ ಕೆಲವು ಬದಲಾವಣೆಗಳು ಇರುವುದನ್ನು ಬಹುಶಃ ನೀವು ಗಮನಿಸಿರಬಹುದು. ಕಾರ್ಡ್‌ಗಳಲ್ಲಿ ಒಂದು ಅಂಚಿನಿಂದ ಕತ್ತರಿಸಿದಂತಿದ್ದರೆ, ಮುಖ್ಯ ಭಾಗದಲ್ಲಿ ಚುಕ್ಕೆಗಳಂತಹ ಹೊಸ ವೈಶಿಷ್ಟ್ಯಗಳನ್ನು ಹೊಂದಿವೆ. ಹಾಗೂ ಮಾಲೀಕರ ಹೆಸರನ್ನು ಮುದ್ರಿಸಲಾಗಿದೆ.
ಈ ಬದಲಾವಣೆಗಳನ್ನು ಯಾಕೆ ಮಾಡಲಾಗಿದೆ ಎಂಬುದು ನಿಮಗೆ ತಿಳಿದಿದೆಯೇ..? ಅಂಧ ವ್ಯಕ್ತಿಗಳು ಮತ್ತು ಭಾಗಶಃ ದೃಷ್ಟಿ ಹೊಂದಿರುವ ಜನರು ಈ ಕಾರ್ಡ್ ಗಳನ್ನು ಬಳಸಲು ಉಪಯೋಗವಾಗಲು ಇವುಗಳನ್ನು ಅಳವಡಿಸಲಾಗಿದೆ.
ಯುಕೆಯಲ್ಲಿ ಸುಮಾರು 2.2 ಮಿಲಿಯನ್ ಜನರು ಕೆಲವು ರೀತಿಯ ದೃಷ್ಟಿ ಸಮಸ್ಯೆಯನ್ನು ಹೊಂದಿದ್ದಾರೆ. ಅದರಲ್ಲಿ 340,000 ಕುರುಡು ಅಥವಾ ಭಾಗಶಃ ದೃಷ್ಟಿ ಹೊಂದಿದ್ದಾರೆ.
ಅನೇಕ ಮಂದಿ ಅಂಧರು ಮತ್ತು ಭಾಗಶಃ ದೃಷ್ಟಿ ಹೊಂದಿರುವವರು ತಮ್ಮ ವ್ಯಾಲೆಟ್‌ನಲ್ಲಿ ಡೆಬಿಟ್/ಕಾರ್ಡ್ ಗಳನ್ನು ಹುಡುಕುವಲ್ಲಿ ತೊಂದರೆಗಳನ್ನು ಹೊಂದಿದ್ದರು. ಏಕೆಂದರೆ ಅದೇ ಗಾತ್ರದ ಸ್ಟೋರ್ ಕಾರ್ಡ್ ಮುಂತಾದವುಗಳಿದ್ದರಿಂದ ಡೆಬಿಟ್ ಕಾರ್ಡ್ ಯಾವುದೆಂದು ತಿಳಿಯುವುದು ಅಷ್ಟು ಸುಲಭವಾಗಿರಲಿಲ್ಲ.
ಕ್ರೆಡಿಟ್ ಕಾರ್ಡ್‌ನಿಂದ ಡೆಬಿಟ್ ಕಾರ್ಡ್ ಅನ್ನು ಆಯ್ಕೆಮಾಡುವುದು, ಕಾರ್ಡ್‌ನ ಯಾವ ತುದಿಯನ್ನು ಕಾರ್ಡ್ ರೀಡರ್‌ಗೆ ಹಾಕಬೇಕು ಎಂದು ಕೂಡ ಇದರಿಂದ ತಿಳಿಯಬಹುದು. ಮತ್ತೊಂದು ಉಪಯುಕ್ತ ವೈಶಿಷ್ಟ್ಯವು ಬ್ರೈಲ್ ಡಾಟ್‌ಗಳನ್ನು ಹೊಂದಿದೆ. ಇದು ಬಳಕೆದಾರರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದ್ದೀರಾ ಎಂಬ ಬಗ್ಗೆ ತಿಳಿಸುತ್ತದೆ. ನ್ಯಾಟ್‌ವೆಸ್ಟ್ ಮತ್ತು ಆರ್ ಬಿ ಎಸ್ ಕ್ರೆಡಿಟ್ ಕಾರ್ಡ್‌ಗಳು ನಾಲ್ಕು ಚುಕ್ಕೆಗಳನ್ನು ಒಂದು ಸಾಲಿನಲ್ಲಿ ಜೋಡಿಸಲಾಗಿರುತ್ತದೆ. ಡೆಬಿಟ್ ಕಾರ್ಡ್‌ಗಳು ಆಯತಾಕಾರದ ಆಕಾರದಲ್ಲಿ ಆರು ಚುಕ್ಕೆಗಳನ್ನು ಹೊಂದಿರುತ್ತವೆ.