ಬೇಸಗೆಯಲ್ಲಿ ವೈರಲ್ ಜ್ವರಗಳು ಕಾಡುವುದು ಸಾಮಾನ್ಯ. ಕಳೆದೊಂದು ದಶಕದಿಂದ ಡೆಂಗ್ಯೂ ಜ್ವರದ ಉಪಟಳ ಹೆಚ್ಚಿದೆ. ಇದಕ್ಕೆ ಔಷಧ ನಮ್ಮ ಮನೆಯಂಗಳದಲ್ಲೇ ಇವೆ.
ಡೆಂಗ್ಯೂ ಜ್ವರ ಕಾಣಿಸಿಕೊಂಡು ಮೂರು ನಾಲ್ಕು ದಿನಗಳಲ್ಲೇ ಅದರ ಲಕ್ಷಣಗಳು ಅಂದರೆ ಬಿಳಿ ರಕ್ತ ಕಣಗಳು ಕಡಿಮೆ ಆಗುತ್ತದೆ. ಜ್ವರಕ್ಕೆ ತುತ್ತಾದ ವ್ಯಕ್ತಿ ಅಪಾಯಕ್ಕೆ ಒಳಗಾಗುತ್ತಾನೆ. ನಮ್ಮ ದೇಹದಲ್ಲಿ ಬಿಳಿರಕ್ತ ಕಣಗಳು ಕಡಿಮೆ ಆಗದಂತೆ ನೋಡಿಕೊಳ್ಳುವ ಶಕ್ತಿ ಈ ಗಿಡದ ರಸಕ್ಕಿದೆ.
ಡೆಂಗ್ಯೂಗೆ ಮಾತ್ರವಲ್ಲ, ಶರೀರದಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುವ ಶಕ್ತಿ ಪಪ್ಪಾಯಿ ರಸಕ್ಕೆ ಇದೆ. ಇದರ ಹಣ್ಣನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಕೃತ್ತು, ಮೆದು ಜೀರ್ಣಕಾಂಗ ಹಾಗೂ ಶ್ವಾಸಕೋಶದಲ್ಲಿ ಬೆಳೆಯಬಹುದಾದ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಶಕ್ತಿ ಕೂಡ ಪಪ್ಪಾಯಿಯಲ್ಲಿದೆ.
ಇದರ ಕಾಯಿಯಿಂದ ಪಲ್ಯೆ, ಸಾಂಬಾರ್ ಮಾಡುತ್ತಾರೆ. ಮಕ್ಕಳಲ್ಲಿ ಜಂತು ಹುಳುಗಳನ್ನ ನಿವಾರಿಸುವ ಶಕ್ತಿ ಇದಕ್ಕೆ ಇದೆ. ಇದರ ಕಾಯಿಯನ್ನು ಸಣ್ಣಗೆ ಹೆಚ್ಚಿ ಕಾಳುಮೆಣಸಿನ ಪುಡಿ, ಜೀರಿಗೆ ಮತ್ತು ನಿಂಬೆ ರಸ ಸೇರಿಸಿ ಸೇವಿಸಿದರೆ ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಜೇನಿನ ಜೊತೆ ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಹೃದಯ ಸಮಸ್ಯೆ ಹಾಗೂ ನರದೌರ್ಬಲ್ಯ ನಿವಾರಣೆಯಾಗುತ್ತದೆ.