alex Certify ಡಿ.9 ರಂದು ವಿಜಯ್ ಸಂಕೇಶ್ವರ್ ಜೀವನಾಧರಿತ ಚಿತ್ರ ಬಿಡುಗಡೆ; ಇದು ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕೆಂದು ಸಿಎಂ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿ.9 ರಂದು ವಿಜಯ್ ಸಂಕೇಶ್ವರ್ ಜೀವನಾಧರಿತ ಚಿತ್ರ ಬಿಡುಗಡೆ; ಇದು ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕೆಂದು ಸಿಎಂ ಅಭಿಪ್ರಾಯ

ವಿಜಯ್ ಸಂಕೇಶ್ವರ್ ಅವರ ಜೀವನ ಚರಿತ್ರೆ ಇದೀಗ ಸಿನಿಮಾ ಆಗ್ತಾ ಇದೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೇಲರ್ ಲಾಂಚ್ ಆಗಿದೆ. ಟ್ರೇಲರ್ ಲಾಂಚ್ ಗೆ ಸಿಎಂ ಸೇರಿದಂತೆ ಅನೇಕ ಸಚಿವರು, ಮುಖಂಡರು ಸಿನಿಮಾ ರಂಗದವರು ಭಾಗಿಯಾಗಿದ್ದರು. ಅವರ ಜೀವನದ ಏಳು ಬೀಳು, ಸಾಧನೆ, ಎಲ್ಲವನ್ನು ತೆರೆ ಮೇಲೆ ತರೋದಿಕ್ಕೆ ಅವರ ಪುತ್ರ ಆನಂದ್ ಸಂಕೇಶ್ವರ್ ಮುಂದಾಗಿದ್ದಾರೆ.

ಈ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಾಶಯ ಕೋರಿದ್ದ ಸಿಎಂ ಬೊಮ್ಮಾಯಿ, ಬಳಿಕ ವಿಜಯ ಸಂಕೇಶ್ವರ್ ಅವರ ಸಾಧನೆಯ ಹಾದಿ ಕುರಿತು ಮಾತನಾಡಿ, ಇವರಿಗೆ ಯಶಸ್ಸಿನ ಹಸಿವಿದೆ‌.‌ ಹೊಸದನ್ನು ಮಾಡುತ್ತಲೇ ಇರುತ್ತಾರೆ. ಅವರಿಗೆ ವಯಸ್ಸಿನ ಹಂಗಿಲ್ಲ. ಅವರ ಜೀವನಾಧಾರಿತ ಚಿತ್ರ ಮೆಗಾ ಹಿಟ್ ಆಗಲಿದೆ ಎಂದು ಹಾರೈಸಿದರು. ಇನ್ನು ಮುಂದುವರೆದಂತೆ ವಿಜಯ ಸಂಕೇಶ್ವರ ಅವರು ಯಾವಾಗಲೂ ಅಡ್ವೆಂಚರ್ ಮಾಡುತ್ತಾರೆ. ಇಡೀ ಜಗತ್ತು ಎಲ್ಲಿ ಹೋಗಬೇಡ ಅಂತ ಹೇಳುತ್ತದೆಯೋ ಅಲ್ಲಿಗೆ ಅವರು ಹೋಗುತ್ತಾರೆ. ಅವರು ಯಶಸ್ವಿ ಆಗಿರುವುದು ಸರಿ ತಪ್ಪು ಹೇಳಿದ್ದರಿಂದ ಮತ್ತು ಸಮಯ ಪ್ರಜ್ಞೆಯಿಂದ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ವಿಜಯ ಸಂಕೇಶ್ವರ ಅವರ ಬದುಕೇ ಒಂದು ರೀತಿ ಅದ್ಬುತ. ಅವರ ಬಗ್ಗೆ ಸಿನೆಮಾ ಮಾಡಿದ್ದು ಒಳ್ಳೆಯದಾಗಿದೆ. ಅವರ ಜೀವನದ ಬಗ್ಗೆ ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು ಅನ್ನುವುದು ನನ್ನ ಬಯಕೆ. ಅವರಿಗೆ ಎಂಎಲ್ ಸಿ ಮಾಡಿದಾಗ ಅವರು ಇಲ್ಲಿ ಕುಳಿತು ಸಮಯ ವ್ಯರ್ಥ ಮಾಡುವುದಿಲ್ಲ ಅಂತ ರಾಜೀನಾಮೆ ನೀಡಿದರು. ಅವರು ಅತ್ಯಂತ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ವ್ಯಕ್ತಿ. ಅವರು ಫ್ಲೈಟ್ ತೆಗೆದುಕೊಂಡು ಲಾಭ ಮಾಡಿದ್ದಾರೆ‌. ಅವರಿಗೆ ದೇಶ, ಧರ್ಮದ ಬಗ್ಗೆ ಅಪಾರವಾದ ಗೌರವ ನಂಬಿಕೆ ಇದೆ. ಅವರು ಕಾಯಕ ನಂಬಿದವರು. ಅವರು ಸವಾಲು ಎದುರಿಸಿದಾಗ ಕಾಯಕ ಶಕ್ತಿ ಅವರನ್ನು ಕೈ ಹಿಡಿದಿದೆ. ರಾಜ್ಯದಲ್ಲಿ ಒಬ್ಬ ಕಾಯಕ ಜೀವಿ ಎಂದು ಹಾಡಿ ಹೊಗಳಿದರು.

ಈ ಸಿನಿಮಾ ಡಿಸೆಂಬರ್ 9 ರಂದು ಬಿಡುಗಡೆ ಆಗಲಿದೆ. ಸುಮಾರು 1400 ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗಲಿದೆ. ಹೊರ ದೇಶ ಅಮೆರಿಕದಲ್ಲಿ 200 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಐದು ಭಾಷೆಗಳಲ್ಲಿ ಅಂದರೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇಷ್ಟು ದಿನ ಬೇರೆ ಬೇರೆ ಬ್ಯುಸಿನೆಸ್ ಮಾಡ್ತಾ ಇದ್ದ ಇವರು ಇದೀಗ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಎಲ್ಲದರಲ್ಲೂ ಯಶಸ್ಸು ಕಂಡಿರುವ ಅವರು, ಸಿನಿಮಾ ಉದ್ಯಮದಲ್ಲಿ ಯಶಸ್ವಿಯಾಗುತ್ತಾರೆ ಎಂಬುದೇ ಎಲ್ಲರ ನಿರೀಕ್ಷೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...