alex Certify ಡಿಸೆಂಬರ್ 9 ಕ್ಕೆ ತೆರೆ ಮೇಲೆ ಬರಲಿದೆ ಗುರ್ತುಂದ ಶೀತಾಕಲಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್ 9 ಕ್ಕೆ ತೆರೆ ಮೇಲೆ ಬರಲಿದೆ ಗುರ್ತುಂದ ಶೀತಾಕಲಂ

ಕನ್ನಡದಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ ಸಿನಿಮಾ ಗುರ್ತುಂದ ಶೀತಾಕಾಲಂ ಎಂಬ ಹೆಸರಿನಲ್ಲಿ ಈಗಾಗಲೇ ತೆಲುಗಿನಲ್ಲಿ ರಿಮೇಕ್ ಆಗಿದ್ದು ಇನ್ನೇನು ಶೂಟಿಂಗ್ ಮುಕ್ತಾಯ ಹಂತ ತಲುಪಿದೆ. ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಇಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಮುಂದಿನ ತಿಂಗಳು ಡಿಸೆಂಬರ್ 9ರಂದು ಈ ಚಿತ್ರ ತೆರೆಕಾಣಲಿದೆ.

ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಸತ್ಯದೇವ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾವ್ಯ ಶೆಟ್ಟಿ, ಮೇಘ ಆಕಾಶ್, ಸುಹಾಸಿನಿ ಮಣಿರತ್ನಂ, ತೆರೆ ಹಂಚಿಕೊಂಡಿದ್ದಾರೆ

ನಾಗ ಶೇಖರ್ ಮೂವೀಸ್, ಮಣಿಕಂಠ ಎಂಟರ್ಟೈನ್ಮೆಂಟ್, ಹಾಗೂ ಶ್ರೀ ವೇದಾಕ್ಷರ ಮೂವೀಸ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಕಾಳ ಭೈರವ ಸಂಗೀತ ಸಂಯೋಜನೆ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...