
ಕನ್ನಡದಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ ಸಿನಿಮಾ ಗುರ್ತುಂದ ಶೀತಾಕಾಲಂ ಎಂಬ ಹೆಸರಿನಲ್ಲಿ ಈಗಾಗಲೇ ತೆಲುಗಿನಲ್ಲಿ ರಿಮೇಕ್ ಆಗಿದ್ದು ಇನ್ನೇನು ಶೂಟಿಂಗ್ ಮುಕ್ತಾಯ ಹಂತ ತಲುಪಿದೆ. ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಇಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಮುಂದಿನ ತಿಂಗಳು ಡಿಸೆಂಬರ್ 9ರಂದು ಈ ಚಿತ್ರ ತೆರೆಕಾಣಲಿದೆ.
ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಸತ್ಯದೇವ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾವ್ಯ ಶೆಟ್ಟಿ, ಮೇಘ ಆಕಾಶ್, ಸುಹಾಸಿನಿ ಮಣಿರತ್ನಂ, ತೆರೆ ಹಂಚಿಕೊಂಡಿದ್ದಾರೆ
ನಾಗ ಶೇಖರ್ ಮೂವೀಸ್, ಮಣಿಕಂಠ ಎಂಟರ್ಟೈನ್ಮೆಂಟ್, ಹಾಗೂ ಶ್ರೀ ವೇದಾಕ್ಷರ ಮೂವೀಸ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಕಾಳ ಭೈರವ ಸಂಗೀತ ಸಂಯೋಜನೆ ನೀಡಿದ್ದಾರೆ.
