
ಡಯಟ್ ಕಾನ್ಸಿಯಸ್ ಆಗಿರುವ ಜನರೀಗ ಬ್ರೇಕ್ ಫಾಸ್ಟ್‌ಗೆ ಅಕ್ಕಿಯ ತಿನಿಸುಗಳ ಬದಲು ಓಟ್ಸ್ ತಿಂಡಿಗಳನ್ನು ಪ್ರಿಪೆರ್ ಮಾಡುತ್ತಾರೆ. ಓಟ್ಸ್‌ನಿಂದ ವೈವಿಧ್ಯಮಯ ತಿನಿಸುಗಳನ್ನು ಮಾಡಿ ಸವಿಯಬಹುದು. ಇಲ್ಲಿದೆ ಓಟ್ಸ್‌ನ ಸ್ಪೆಷಲ್ ರೆಸಿಪಿ ಓಟ್ಸ್ ಪರೋಟ.
ಬೇಕಾಗುವ ಸಾಮಾಗ್ರಿಗಳು
ಓಟ್ಸ್ – 2 ಕಪ್
ಈರುಳ್ಳಿ – 1
ಜೀರಿಗೆ – 1 ಸಣ್ಣ ಚಮಚ
ಹಸಿ ಮೆಣಸಿನಕಾಯಿ – 1
ಉಪ್ಪು- ರುಚಿಗೆ ತಕ್ಕಷ್ಟು
ಗರಂ ಮಸಾಲ – 1 ಚಿಟಿಕೆ
ಆಮ್‌ಚೂರ್ ಪುಡಿ – 1 ಚಿಟಿಕೆ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಗೋಧಿ ಹಿಟ್ಟು – 1 ಬೌಲ್
ಎಣ್ಣೆ – ಸ್ವಲ್ಪ
ವೆಜ್ ಪರೋಟ ಮಾಡುವ ವಿಧಾನ
ಮಾಡುವ ವಿಧಾನ
ಓಟ್ಸ್, ಹೆಚ್ಚಿದ ಈರುಳ್ಳಿ, ಜೀರಿಗೆ, ಹೆಚ್ಚಿದ ಹಸಿಮೆಣಸಿನಕಾಯಿ, ಗರಂ ಮಸಾಲ ಪುಡಿ, ಆಮ್‌ಚೂರ್ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಹಾಕಿ ಮಿಶ್ರಣ ಮಾಡಿ ನೀರಿನಲ್ಲಿ ಕಲಸಿಕೊಳ್ಳಬೇಕು. ಸ್ವಲ್ಪ ಗಟ್ಟಿಯಾಗಿ ಕಲಸಿಕೊಂಡು ಉಂಡೆ ಮಾಡಿಟ್ಟುಕೊಳ್ಳಬೇಕು.
ಬಳಿಕ ಗೋಧಿ ಹಿಟ್ಟನ್ನು ಚೆನ್ನಾಗಿ ಕಲಸಿ ಲಟ್ಟಿಸಿಕೊಳ್ಳಬೇಕು. ಅದರ ಮಧ್ಯೆ ಓಟ್ಸ್ ಮಿಶ್ರಣವಿಟ್ಟು ಮುಚ್ಚಿ, ಮತ್ತೆ ಲಟ್ಟಿಸಿಕೊಳ್ಳಬೇಕು.
ಕಾದ ತವಾದಲ್ಲಿ ಎಣ್ಣೆ ಹಾಕಿ ಎರಡೂ ಕಡೆ ಕೆಂಪಗೆ ಬೇಯಿಸಿದರೆ ಓಟ್ಸ್ ಪರೋಟ ಸವಿಯಲು ಸಿದ್ಧ.