alex Certify ʼವೆಜ್ ಪರೋಟʼ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವೆಜ್ ಪರೋಟʼ ಮಾಡುವ ವಿಧಾನ

ದಿನವೂ ಚಿತ್ರಾನ್ನ, ಮೊಸರನ್ನ, ಉಪ್ಪಿಟ್ಟು, ಪುಳಿಯೋಗರೆ, ಪೂರಿ ಇತ್ಯಾದಿ ಇತ್ಯಾದಿ ಬಿಟ್ಟು ಸ್ವಲ್ಪ ವೆರೈಟಿ ಫುಡ್ ಯಾಕೆ ಟ್ರೈ ಮಾಡಬಾರದು. ಅದಕ್ಕಾಗಿಯೇ ಇಲ್ಲಿದೆ ನೋಡಿ ಸಿಂಪಲ್ ವೆಜ್ ಪರೋಟ ರೆಸಿಪಿ….

ಬೇಕಾಗುವ ಸಾಮಗ್ರಿಗಳು:

ಮೈದಾ – 3 ಕಪ್, ಗೋಧಿಹಿಟ್ಟು – 1 ಕಪ್, ಕ್ಯಾರೆಟ್ – 2, ಬೇಯಿಸಿದ ಆಲೂಗಡ್ಡೆ – 2, ಕ್ಯಾಪ್ಸಿಕಂ – 1, ಮೆಂತ್ಯ ಸೊಪ್ಪು – 1 ಕಟ್ಟು, ಈರುಳ್ಳಿ – 1 ಕಪ್, ಮೊಸರು – ಸ್ವಲ್ಪ, ಹಸಿಮೆಣಸಿನಕಾಯಿ – 2, ಅಚ್ಚಖಾರದ ಪುಡಿ – 1 ಚಮಚ, ಗರಂ ಮಸಾಲಾ – 1 ಚಮಚ, ಆಮ್ ಚೂರ್ ಪೌಡರ್ – 1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು , ಚೀಸ್ – ಸ್ವಲ್ಪ.

ಮಾಡುವ ವಿಧಾನ :

ಮೈದಾ, ಗೋಧಿಹಿಟ್ಟು, ಸ್ವಲ್ಪ ಎಣ್ಣೆ, ಸ್ವಲ್ಪ ನೀರು, ಸ್ವಲ್ಪ ಮೊಸರು ಹಾಕಿ ಚಪಾತಿ ಹದಕ್ಕೆ ಕಲಸಿ 10 ನಿಮಿಷ ನೆನೆಯಲು ಬಿಡಬೇಕು. ಪ್ಯಾನ್‌ ಗೆ ಎಣ್ಣೆ, ಹಸಿಮೆಣಸಿನಕಾಯಿ, ಈರುಳ್ಳಿ, ಮೆಂತ್ಯ ಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಕಲಕಬೇಕು.

ನಂತರ ಅದಕ್ಕೆ ಹೆಚ್ಚಿಟ್ಟ ಕ್ಯಾರೆಟ್, ಕ್ಯಾಪ್ಸಿಕಂ, ಹಾಕಿ ಬೇಯುವವರೆಗೆ ಬಿಡಬೇಕು. ಇದಕ್ಕೆ ಸ್ಮಾಶ್ ಮಾಡಿದ ಆಲೂಗಡ್ಡೆ, ಅಚ್ಚಖಾರದ ಪುಡಿ, ಗರಂ ಮಸಾಲಾ, ಆಮ್ ಚೂರ್ ಪೌಡರ್, ತುರಿದ ಚೀಸ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಬೇಕು.

ಇದನ್ನು ನಾದಿಟ್ಟ ಮೈದಾವನ್ನು ಚಿಕ್ಕ ಉಂಡೆ ಮಾಡಿ ಹೋಳಿಗೆಗೆ ಹೂರಣ ಇಟ್ಟಂತೆ ಇಟ್ಟು ಲಟ್ಟಿಸಬೇಕು. ತವಾಗೆ ಎಣ್ಣೆ ಹಾಕಿ ಪರೋಟವನ್ನು ಎರಡೂ ಕಡೆ ಸರಿಯಾಗಿ ಬೇಯಿಸಬೇಕು. ಪರೋಟ ಸಿದ್ಧವಾಗುತ್ತಿದ್ದಂತೆ ಮೊಸರು ಅಥವಾ ಉಪ್ಪಿನಕಾಯಿ ಜೊತೆ ಬಿಸಿ ಬಿಸಿ ಸವಿದರೆ ಚಂದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...