alex Certify ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ ಮತ್ತೆ ಶುರು; ಆಪಲ್ ಬಳಕೆದಾರರಿಗೆ ದುಬಾರಿ ಶುಲ್ಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ ಮತ್ತೆ ಶುರು; ಆಪಲ್ ಬಳಕೆದಾರರಿಗೆ ದುಬಾರಿ ಶುಲ್ಕ

ಪ್ರಭಾವಿ ಸೋಶಿಯಲ್ ಮೀಡಿಯಾ ಟ್ವಿಟರ್ ವಿಶ್ವದ ಅತಿ ದೊಡ್ಡ ಸಿರಿವಂತ ಎಲಾನ್ ಮಸ್ಕ್ ಅವರ ಪಾಲಾಗುತ್ತಿದ್ದಂತೆ ಹಲವು ಬದಲಾವಣೆಗಳನ್ನು ತರಲಾಗಿತ್ತು. ಈ ಪೈಕಿ ಬಳಕೆದಾರರಿಗೆ ಬ್ಲೂಟಿಕ್ ಸೇವೆ ಕೂಡಾ ಒಂದಾಗಿದ್ದು, ಇದಕ್ಕಾಗಿ ಶುಲ್ಕ ವಿಧಿಸಲು ತೀರ್ಮಾನಿಸಲಾಗಿತ್ತು.

ಆದರೆ ಈ ಸೇವೆ ಆರಂಭವಾದಷ್ಟೇ ವೇಗದಲ್ಲಿ ಮತ್ತೆ ಹಿಂಪಡೆದುಕೊಂಡಿದ್ದು, ಮತ್ತೊಂದು ದಿನಾಂಕ ನಿಗದಿಪಡಿಸಲಾಗಿತ್ತಾದರೂ ಅದನ್ನು ಮುಂದೂಡಲಾಗಿತ್ತು. ಇದೀಗ ಕೊನೆಗೂ ಬ್ಲೂ ಟಿಕ್ ಸೇವೆ ಮತ್ತೆ ಶುರುವಾಗಿದ್ದು ಸೋಮವಾರದಿಂದಲೇ ಇದು ಆರಂಭವಾಗಲಿದೆ.

ಶನಿವಾರದಂದು ಕಂಪನಿ ಈ ಕುರಿತು ಟ್ವೀಟ್ ಮಾಡಿದ್ದು, ವೆಬ್ ಬಳಕೆದಾರರಿಗೆ ತಿಂಗಳಿಗೆ 8 ಡಾಲರ್ ಶುಲ್ಕ ವಿಧಿಸಲಾಗಿದ್ದರೆ, ಆಪಲ್ ಬಳಕೆದಾರರಿಗೆ 11 ಡಾಲರ್ ಶುಲ್ಕ ವಿಧಿಸಲಾಗುತ್ತದೆ. ಮೂಲಗಳ ಪ್ರಕಾರ ಆಪಲ್ ಬಳಕೆದಾರರಿಗೆ ಹೆಚ್ಚಿನ ಶುಲ್ಕ ವಿಧಿಸಲು ಅಪ್ಲಿಕೇಶನ್ ಸ್ಟೋರ್ ನಲ್ಲಿ ವಿಧಿಸಲಾದ ಶುಲ್ಕ ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...