alex Certify ಟ್ವಿಟರ್​ನಲ್ಲಿ ವೈರಲ್​ ಆಯ್ತು ʼಶ್ವೇತಾʼ ಹ್ಯಾಶ್​ ಟ್ಯಾಗ್….? ಕಾರಣ ತಿಳಿದ್ರೆ ಬಿದ್ದು ಬಿದ್ದು ನಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲಿ ವೈರಲ್​ ಆಯ್ತು ʼಶ್ವೇತಾʼ ಹ್ಯಾಶ್​ ಟ್ಯಾಗ್….? ಕಾರಣ ತಿಳಿದ್ರೆ ಬಿದ್ದು ಬಿದ್ದು ನಗ್ತೀರಾ…!

ಕೃಷಿ ಮಸೂದೆ ಜಾರಿಗೆ ಬಂದ ಬಳಿಕ ಟ್ವಿಟರ್​ನಲ್ಲಿ ಸದ್ಯ ರೈತ ಪ್ರತಿಭಟನೆಯ ವಿಚಾರವೇ ಹೆಚ್ಚು ಹೈಲೈಟ್​ ಆಗ್ತಿದೆ. ಅದನ್ನ ಬಿಟ್ಟರೆ ಐಪಿಎಲ್​ ಹರಾಜು ಪ್ರಕ್ರಿಯೆ ಕೂಡ ಆಗಾಗ ಸದ್ದು ಮಾಡಿದೆ. ಆದರೆ ಗುರುವಾರ ಇದ್ದಕ್ಕಿದಂತೆ ಶ್ವೇತಾ ಎಂಬ ಹ್ಯಾಶ್​ಟ್ಯಾಗ್​ ಟ್ವಿಟರ್​ನಲ್ಲಿ ಧೂಳೆಬ್ಬಿಸುತ್ತಿದೆ.

ಅಂದಹಾಗೆ ಶ್ವೇತಾ ಎಂಬ ಹ್ಯಾಶ್​ಟ್ಯಾಗ್​ ವೈರಲ್​ ಆಗೋಕೆ ಕಾರಣ ಒಂದು ವಿಡಿಯೋ. ಆನ್​ಲೈನ್​ ಕ್ಲಾಸ್​ ವೇಳೆ ಮೈಕ್​ ಆನ್​ ಇದೆ ಎಂಬುದನ್ನ ಅರಿಯದೇ ಶ್ವೇತಾ ವೈಯಕ್ತಿಕ ವಿಚಾರಗಳನ್ನ ಮಾತನಾಡಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಶ್ವೇತಾ ಎಂಬ ಹ್ಯಾಶ್​ಟ್ಯಾಗ್​ನ ಅಡಿಯಲ್ಲಿ ಬರೋಬ್ಬರಿ 11 ಸಾವಿರ ಟ್ವೀಟ್​ಗಳನ್ನ ಮಾಡಲಾಗಿದ್ದು ಈ ಮೂಲಕ ಶ್ವೇತಾ ಹ್ಯಾಶ್​ಟ್ಯಾಗ್​ ಟಾಪ್​ 4 ಸ್ಥಾನದಲ್ಲಿದೆ.

ಗಾಳಿಯಿಂದ ಗರ್ಭ ಧರಿಸಿದ್ದಾಳಂತೆ ಮಹಿಳೆ…..! 15 ನಿಮಿಷದಲ್ಲಾಗಿದೆ ಹೆರಿಗೆ

ಆನ್​ಲೈನ್​ ಕ್ಲಾಸ್​​ ವೇಳೆ ಮೈಕ್​ ಆನ್ ಮಾಡಿಕೊಂಡಿದ್ದ ಶ್ವೇತಾ ತನ್ನ ಗೆಳೆಯನ ಪ್ರೇಯಸಿಗೆ ಲೈಂಗಿಕ ಕ್ರಿಯೆ ಮೇಲೆ ಆಸಕ್ತಿ ಜಾಸ್ತಿ ಎಂಬ ವಿಚಾರವಾಗಿ ಮಾತನಾಡುತ್ತಲೇ ಹೋಗಿದ್ದಾಳೆ. ಆಕೆಗೆ ಎಲ್ಲರೂ ಮೈಕ್​ ಆಫ್​ ಮಾಡಿಕೊಳ್ಳುವಂತೆ ಹೇಳಿದ್ದರೂ ಸಹ ಇದರ ಅರಿವೇ ಇಲ್ಲದೇ ಶ್ವೇತಾ ಗೆಳೆಯನ ಪ್ರೇಯಸಿಯ ಬಗ್ಗೆ ಇಡೀ ತರಗತಿಗೆ ಕೇಳುವಂತೆ ಮಾತನಾಡಿದ್ದಾಳೆ.

ಮೈಕ್​ ಆನ್​ ಆಗಿದ್ದರ ಬಗ್ಗೆ ಪರಿವೇ ಇಲ್ಲದ ಶ್ವೇತಾ, ಹೇಗೆ ತನ್ನ ಗೆಳೆಯ ಸೆಕ್ಸ್​ ಮೇಲೆ ಆಸಕ್ತಿ ಹೊಂದಿರುವ ಪ್ರೇಯಸಿಯನ್ನ ಹೊಂದಿದ್ದಾನೆ. ಹಾಗೂ ಅವರಿಬ್ಬರ ನಡುವೆ ದೈಹಿಕ ಸಂಪರ್ಕ ಇದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಹೋಗಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...