ತಮ್ಮ ವಿರುದ್ಧದ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಟೆಸ್ಟ್ ತಂಡದ ಉಪ-ನಾಯಕ ಅಜಿಂಕ್ಯಾ ರಹಾನೆ, ಫೇಸ್ಬುಕ್‌ನಲ್ಲಿ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ.
ಸ್ಮೈಲ್ ಮಾಡುತ್ತಿರುವ ತಮ್ಮ ಚಿತ್ರವೊಂದನ್ನು ಪೋಸ್ಟ್ ಮಾಡಿ, “ಟ್ರೋಲ್‌ಗಳೇ ಟ್ರೋಲ್ ಆದಾಗ ನನ್ನ ಪ್ರತಿಕ್ರಿಯೆ!” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ ರಹಾನೆ.
ಟಿ – ಮೊಬೈಲ್ ಮೇಲೆ ಸೈಬರ್ ದಾಳಿ : 7.8 ಮಿಲಿಯನ್ ಗ್ರಾಹಕರ ಮಾಹಿತಿ ಸೋರಿಕೆ
ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ರಹಾನೆ ಬಹಳ ಟೀಕೆಗೆ ಒಳಗಾಗಿದ್ದಾರೆ.
ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹಮ್ಮಿಕೊಳ್ಳಲಾದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬಹಳ ತಾಳ್ಮೆಯಿಂದ ಆಡಿದ ರಹಾನೆ 61 ರನ್‌ಗಳಿಸಿ ತಂಡದ ನೆರವಿಗೆ ಧಾವಿಸಿದ್ದರು.
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಬೇಗನೇ ಔಟಾಗಿ ತಂಡ ಸಂಕಷ್ಟದಲ್ಲಿದ್ದಾಗ ಪೂಜಾರಾ ಜೊತೆಗೆ ಸ್ಥಿರವಾಗಿ ನಿಂತ ರಹಾನೆ ಅಮೂಲ್ಯವಾದ ಇನಿಂಗ್ಸ್ ಆಡಿದ್ದಾರೆ.