alex Certify ಟ್ರಾಫಿಕ್ ASI ದಿಢೀರ್ ನಾಪತ್ತೆ; ಕಂಗಾಲಾದ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್ ASI ದಿಢೀರ್ ನಾಪತ್ತೆ; ಕಂಗಾಲಾದ ಕುಟುಂಬ

ಮಡಿಕೇರಿ: ಸಂಚಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಎಸ್ಐ ಓರ್ವರು ಏಕಾಏಕಿ ನಾಪತ್ತೆಯಾಗಿದ್ದು, ಕುಟುಂಬದವರು ಆತಂಕಕ್ಕೀಡಾಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ.

ಸುರೇಶ್ ನಾಪತ್ತೆಯಾಗಿರುವ ಟ್ರಾಫಿಕ್ ಎಎಸ್ ಐ. ಹಾಸನ ಜಿಲ್ಲೆ ಅರಕಲಗೋಡು ಮೂಲದ ಸುರೇಶ್ ಕುಶಾಲನಗರದಲ್ಲಿ ಟ್ರಾಫಿಕ್ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ನಿನ್ನೆಯಿಂದ ಕರ್ತವ್ಯಕ್ಕೂ ಹಾಜರಾಗದೇ ಮನೆಗೂ ಹೋಗದೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಸುರೇಶ್ ವಾಸವಿದ್ದ ವಸತಿ ನಿಲಯಕ್ಕೂ ಬೀಗ ಹಾಕಲಾಗಿದ್ದು, ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಪತಿ ಏಕಾಏಕಿ ಕಣ್ಮರೆಯಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಕುಶಾಲನಗರಕ್ಕೆ ಆಗಮಿಸಿರುವ ಸುರೇಶ್ ಪತ್ನಿ ಹಾಗೂ ಕುಟುಂಬದವರು ಕಂಗಾಲಾಗಿದ್ದಾರೆ. ನಾಪತ್ತೆಯಾಗಿರುವ ಎಎಸ್ಐಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...