ಟೊಮೊಟೊ ತಿಂದರೆ ಕಿಡ್ನಿ ಸ್ಟೋನ್ ಅಗುತ್ತದೆ ಎಂದು ಹತ್ತಾರು ಮಂದಿ ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಸತ್ಯಾಸತ್ಯತೆ ಎಂದಾದರೂ ತಿಳಿದಿದ್ದೀರಾ?
ಟೊಮೆಟೊದಲ್ಲಿ ವಿಟಮಿನ್ ಸಿ, ಎ, ಪೊಟ್ಯಾಶಿಯಂ ಮತ್ತು ನಾರಿನಂಶ ಸಾಕಷ್ಟಿದೆ. ಮುಖ್ಯವಾಗಿ ಕಣ್ಣಿನ ಸಮಸ್ಯೆ ಇರುವವರಿಗೆ, ಮಧುಮೇಹ ಸಮಸ್ಯೆಗೆ ಒಳಗಾದವರಿಗೆ, ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮದ ಮೇಲೆ ಹಾನಿ ಉಂಟಾದವರಿಗೆ ಟೊಮೆಟೊ ಪ್ರಯೋಜನಕಾರಿ.
ಟೊಮೆಟೊದಲ್ಲಿ ಅಕ್ಸಲೇಟ್ ಎಂಬ ಅಂಶ ಇರುವ ಕಾರಣ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಲು ಇದು ಕಾರಣ ಎಂದು ನಂಬಿದ್ದಾರೆ. ಟೊಮೆಟೊ ತಿಂದರೆ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ ಎಂಬ ಮಾತು ಶುದ್ಧ ಸುಳ್ಳು. ಟೊಮೆಟೊದಲ್ಲಿ ಅಕ್ಸಲೇಟ್ ಪ್ರಮಾಣ ತೀರಾ ಕಡಿಮೆ ಪ್ರಮಾಣದಲ್ಲಿದ್ದು ಇದು ಕಿಡ್ನಿಯಲ್ಲಿ ಕಲ್ಲುಂಟು ಮಾಡುವುದಿಲ್ಲ. ಒಂದು ವೇಳೆ ನಿಮಗೆ ಮೂತ್ರಪಿಂಡದ ಸಮಸ್ಯೆ ಇಲ್ಲದಿದ್ದರೆ ಯಾವುದೇ ಭೀತಿಯಿಲ್ಲದೆ ಇವನ್ನು ಸೇವಿಸಿ. ಪಾಲಕ್ ಸೊಪ್ಪು, ಹುರುಳಿ ಕಾಯಿ, ಬೀಟ್ರೂಟ್ ಗಳ ಸೇವನೆ ಕಡಿಮೆ ಮಾಡಿ.