ಟೈಲ್ಸ್ ಮೇಲೆ ಬಿದ್ದ ಪೈಂಟ್ ಕಲೆಗಳನ್ನು ತೆಗೆಯುವುದು ತುಂಬಾ ಕಷ್ಟಕರವಾದ ಕೆಲಸ. ತುಂಬಾ ಉಜ್ಜಿದರೆ ಟೈಲ್ಸ್ ಹಾಳಾಗುತ್ತದೆ. ತೆಗೆಯದಿದ್ದರೆ ಅದು ಗಲೀಜಾಗಿ ಕಾಣಿಸುತ್ತದೆ. ಹಾಗಾಗಿ ಅದನ್ನು ಸುಲಭವಾಗಿ ನಿವಾರಿಸಲು ಈ ಮಾರ್ಗಗಳನ್ನು ಅನುಸರಿಸಿ.
ನೈಲ್ ರಿಮೂವರ್ ನಿಂದ ಸುಲಭವಾಗಿ ಪೈಂಟ್ ಕಲೆಗಳನ್ನು ತೆಗೆಯಬಹುದು. ನೈಲ್ ರಿಮೂವರ್ ಅನ್ನು ಮೈಕ್ರೋಫೈಬರ್ ಬಟ್ಟೆಯ ಮೇಲೆ ಹಾಕಿ ಅದರಿಂದ ಟೈಲ್ಸ್ ಅನ್ನು ಉಜ್ಜಿ. ಇದರಿಂದ ಪೈಂಟ್ ಸುಲಭವಾಗಿ ಹೋಗುತ್ತದೆ.
ಹಬ್ಬಕ್ಕೆ ಊರಿಗೆ ಹೋಗುವ ಮೊದಲು ತಿಳಿದಿರಲಿ ಈ ನಿಯಮ
ಟೈಲ್ಸ್ ಮೇಲೆ ಬಿದ್ದ ಪೈಂಟ್ ಕಲೆಗಳನ್ನು ತೆಗೆಯಲು ವಿನೆಗರ್ ಸಹಕಾರಿಯಾಗಿದೆ. ಬಿಳಿ ವಿನೆಗರ್ ಮತ್ತು ಕೆಲವು ಹನಿ ಎಸೆನ್ಷಿಯಲ್ ಆಯಿಲ್ ಅನ್ನು ಸೇರಿಸಿ ಬಿಸಿ ಮಾಡಿ ಮೈಕ್ರೋಫೈಬರ್ ಬಟ್ಟೆಯಿಂದ ಅದ್ದಿ ಉಜ್ಜಿದರೆ ಕಲೆಗಳು ಸುಲಭವಾಗಿ ಹೋಗುತ್ತದೆ.
ಟೈಲ್ಸ್ ಮೇಲೆ ಬಿದ್ದ ಪೈಂಟ್ ಕಲೆಗಳನ್ನು ತೆಗೆಯಲು ಸೀಮೆಎಣ್ಣೆಯನ್ನು ಬಳಸಬಹುದು. ಇದರಲ್ಲಿರುವ ರಾಸಾಯನಿಕಗಳು ಪೈಂಟ್ ಅನ್ನು ಕರಗಿಸುತ್ತದೆ. ಆಗ ಬಟ್ಟೆಯಿಂದ ಉಜ್ಜಿದರೆ ಪೈಂಟ್ ಸುಲಭವಾಗಿ ಬರುತ್ತದೆ.