ಬಿರಿಯಾನಿ ಎಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಮಶ್ರೂಮ್ ಬಳಸಿ ಮಾಡುವ ರುಚಿಕರವಾದ ಬಿರಿಯಾನಿ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ ಅಕ್ಕಿ, 1 ಕಪ್ ಮಶ್ರೂಮ್, 1 ಈರುಳ್ಳಿ, 1 ಟೋಮೆಟೊ, 1 ಟೇಬಲ್ ಸ್ಪೂನ್-ಕೊತ್ತಂಬರಿ ಸೊಪ್ಪು, 1 ಟೇಬಲ್ ಸ್ಪೂನ್ ಪುದೀನಾ ಸೊಪ್ಪು, 2 ಹಸಿಮೆಣಸು, ಖಾರದ ಪುಡಿ-1 ಚಮಚ, ½ ಟೀ ಸ್ಪೂನ್-ಸೋಂಪು, ಗರಂ ಮಸಾಲೆ-1 ಟೀ ಸ್ಪೂನ್, ಅರಿಶಿನ-1/4 ಟೀ ಸ್ಪೂನ್, ಧನಿಯಾ ಪುಡಿ-1 ಚಮಚ, 1 ಚಮಚ-ಶುಂಠಿ, ಬೆಳ್ಳುಳ್ಳಿ ಪೇಸ್ಟ್, 1 ಟೇಬಲ್ ಸ್ಪೂನ್ –ಮೊಸರು, 1 ಟೇಬಲ್ ಸ್ಪೂನ್-ತುಪ್ಪ, 1 ಟೇಬಲ್ ಸ್ಪೂನ್-ಎಣ್ಣೆ, 1 ಚಮಚ ಲಿಂಬೆಹಣ್ಣಿನ ರಸ, ಉಪ್ಪು-ರುಚಿಗೆ ತಕ್ಕಷ್ಟು, 1 ತುಂಡು-ಚಕ್ಕೆ, 2-ಏಲಕ್ಕಿ, 2-ಲವಂಗ.
ಮಾಡುವ ವಿಧಾನ:
ಮೊದಲಿಗೆ ಅಕ್ಕಿಯನ್ನು ತೊಳೆದು ½ ಗಂಟೆಗಳ ಕಾಲ ನೆನೆಸಿಡಿ. ನಂತರ ಈರುಳ್ಳಿ, ಟೊಮೆಟೊವನ್ನು ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ಇಡಿ. ಇದಕ್ಕೆ ಎಣ್ಣೆ, ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ ಹಾಕಿ ನಂತರ ಇದಕ್ಕೆ ಈರುಳ್ಳಿ ಸೇರಿಸಿ ಫ್ರೈ ಮಾಡಿ ಇದಕ್ಕೆ ಹಸಿಮೆಣಸು ಹಾಕಿ. ನಂತರ ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಪುದೀನಾ ಸೇರಿಸಿ ಫ್ರೈ ಮಾಡಿ.
ನಂತರ ಟೊಮೆಟೊ ಹಾಕಿ. ಟೊಮೆಟೊ ಮೆತ್ತಗಾದ ನಂತರ ಇದಕ್ಕೆ ಧನಿಯಾ, ಅರಿಶಿನ, ಗರಂ ಮಸಾಲೆ ಸೇರಿಸಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಕತ್ತರಿಸಿದ ಮಶ್ರೂಮ್ ಹಾಕಿ ಫ್ರೈ ಮಾಡಿ. ಮಶ್ರೂಮ್ ನೀರು ಬಿಡುತ್ತಿದ್ದಂತೆ ಇದಕ್ಕೆ ಮೊಸರು ಸೇರಿಸಿ ನಂತರ ಇದಕ್ಕೆ 1 ½ ಕಪ್ ನೀರು ಹಾಕಿ ಅದು ಕುದಿ ಬರುತ್ತಿದ್ದಂತೆ ಅದಕ್ಕೆ ಅಕ್ಕಿ ಹಾಕಿ ಲಿಂಬೆಹಣ್ಣಿನ ರಸ ಸೇರಿಸಿ ಕೊತ್ತಂಬರಿಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ವಿಷಲ್ ಕೂಗಿಸಿಕೊಂಡರೆ ರುಚಿಕರವಾದ ಮಶ್ರೂಮ್ ಬಿರಿಯಾನಿ ಸವಿಯಲು ಸಿದ್ಧ.