ಶಾಪಿಂಗ್ ಮಾಲ್‌ನಲ್ಲಿ ತನ್ನ ಮಗ ಟೆಲಿಟಬ್ಬಿ ಪ್ರತಿಮೆ ನಾಶ ಮಾಡಿದ್ದರಿಂದ ಭಾರಿ ಪರಿಹಾರವನ್ನು ಕಟ್ಟಬೇಕಾಗಿಬಂದ ಪ್ರಸಂಗ ಹಾಂಕ್ ಕಾಂಗ್‌ನಲ್ಲಿ ನಡೆದಿದೆ.
ಹಾಂಗ್ ಕಾಂಗ್‌ನ ಮೊಂಕಾಕ್ ಜಿಲ್ಲೆಯ ಲಾಂಗ್‌ಹ್ಯಾಮ್ ಪ್ಲೇಸ್ ಶಾಪಿಂಗ್ ಮಾಲ್‌ನಲ್ಲಿರುವ ಆಟಿಕೆ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ಚೆಂಗ್ ಎಂಬಾತ ಮೊಬೈಲ್ ಕರೆ ಸ್ವೀಕರಿಸಲು ಆಟಿಕೆ ಮಳಿಗೆಯಿಂದ ಹೊರಬಂದಿದ್ದರು, ಈ ವೇಳೆ ಆಟಿಕೆ ಅಂಗಡಿಯೊಳಗೆ ಜೋರಾಗಿ ಶಬ್ದ ಕೇಳಿಸಿದೆ. ಆತ ಒಳಗೆ ಹೋದಾಗ ತನ್ನ ಮಗ ನಿಶ್ಯಬ್ಧವಾಗಿ ನಿಂತು ಟೆಲಿಟುಬಿಯ ಮುರಿದ ಪ್ರತಿಮೆಯನ್ನು ನೋಡುತ್ತಿದ್ದ.
ತಮ್ಮ ಮಗ ಗೊಂಬೆ ಬೀಳಿಸಿದನೆಂದು ಅಂಗಡಿಯವರು $33,600 (ಅಂದಾಜು ರೂ. 3,29,926) ಆತನಿಂದ ವಸೂಲಿ ಮಾಡಿದರು. ಫೇಸ್‌ಬುಕ್ ಬಳಕೆದಾರರು ಈ ಘಟನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಚೆಂಗ್ ಪ್ರಕಾರ ಆ ಗೊಂಬೆ ಆಕಸ್ಮಿಕವಾಗಿ ಬಿದ್ದಿದ್ದು, ಇದಕ್ಕೆ ತನ್ನ ಮಗ ಕಾರಣನಲ್ಲ ಎಂದು ಸಿಸಿ ಕ್ಯಾಮರಾ ಮೂಲಕ ಕಂಡುಕೊಂಡರೂ ದಂಡ ಮೊತ್ತ ವಾಪಸ್ ಕೊಡಲು ಅಂಗಡಿಯವರು ಒಪ್ಪಲಿಲ್ಲ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.